ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಮಯಕ್ಕೆ ಸರಿಯಾಗಿ ಪೋಷಕರು ಶಾಲಾ ಶುಲ್ಕ ಪಾವತಿಸಿಲ್ಲ ಎಂದು ಸ್ಕೂಲ್ ಮ್ಯಾನೇಜರ್ ಒಬ್ಬ ವಿದ್ಯಾರ್ಥಿಗಳನ್ನು ಶಾಲೆಯ ಗೇಟ್‌ನಿಂದ ಹೊರ ಹಾಕಿ ಬಿಸಿಲಲ್ಲಿ ಕೂರಿಸಿದ್ದು, ಇದರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಶಾಲಾ ಶುಲ್ಕ ಪಾವತಿಸಿಲ್ಲ ಎಂದು ಸ್ಕೂಲ್ ಮ್ಯಾನೇಜರ್ ಸುಮಾರು 100 ಮುಗ್ಧ ವಿದ್ಯಾರ್ಥಿಗಳನ್ನು ಗೇಟ್ ಒಳಗೆ ಬರಲು ಬಿಡದೆ ಬಿಸಿಲಲ್ಲಿ ಕೂರಿಸಿದ್ದಾನೆ.
ಅಷ್ಟೇ ಅಲ್ಲದೆ ವಿಡಿಯೋ ಮಾಡುವ ಮೂಲಕ ಶುಲ್ಕ ಕಟ್ಟುವಂತೆ ಒತ್ತಡ ಹೇರಿ ಮಕ್ಕಳಿಗೆ ಅವಮಾನವನ್ನೂ ಮಾಡಿದ್ದಾನೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಮ್ಯಾನೇಜರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಸದ್ಯ ಈ ಬಗ್ಗೆ ಶಾಲಾ ನಿರೀಕ್ಷಕರು ತನಿಖೆಗೆ ಆದೇಶಿಸಿದ್ದಾರೆ.
#सिद्धार्थनगर
शर्मनाक घटना😡
विद्यालय की मान्यता समाप्त होना चाहिए👉स्कूल प्रबंधक की तानाशाही का वीडियो वायरल, फीस जमा नहीं होने पर बच्चों को अपमानित किया,
👉सैकड़ों बच्चों को रोड पर बैठाकर वीडियो बनाया, श्यामराजी हाईस्कूल के प्रबंधक ने वीडियो वायरल किया,#Siddharthnagar… pic.twitter.com/PcvAeaefT1
— बेसिक शिक्षा: सूचना और सामग्री (@Info_4Education) October 1, 2024