ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿರಿಯ ವಿದ್ಯಾರ್ಥಿಗಳಿಂದ Ragging ಗೆ ಒಳಗಾಗಿದ್ದ ಎಂಬಿಬಿಎಸ್ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಗುಜರಾತ್ ನ ಪಟಾನ್ ಜಿಲ್ಲೆಯಲ್ಲಿ ವರದಿಯಾಗಿದೆ.
ಸತತ 3 ಗಂಟೆಗಳ ಕಾಲ ನಿಲ್ಲುವಂತೆ ಹೇಳಿ ಹಿರಿಯ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಶನಿವಾರ ನಡೆದ ಘಟನೆಯ ಕುರಿತು ಕಾಲೇಜು ತನಿಖೆ ಆರಂಭಿಸಿದೆ. ದೀರ್ಘಕಾಲ ನಿಲ್ಲುವಂತೆ ಮಾಡಿದ ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದು, ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. ಶನಿವಾರ ರಾತ್ರಿ ಪಟಾನ್‌ನ ಧಾರ್‌ಪುರದಲ್ಲಿರುವ ಜಿಎಂಇಆರ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹಾಸ್ಟೆಲ್‌ನಲ್ಲಿ ಶನಿವಾರ ರಾತ್ರಿ ಸಂತ್ರಸ್ತೆ ಅನಿಲ್ ಮೆಥನಿಯಾ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ಕಾಲೇಜಿನ ಡೀನ್ ಡಾ.ಹಾರ್ದಿಕ್ ಶಾ ತಿಳಿಸಿದ್ದಾರೆ.