ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಕ್ತಿ ಯೋಜನೆ ರಾಜ್ಯದ ಹೆಣ್ಣುಮಕ್ಕಳಿಗೆ ವರದಾನವಾಗಿದೆ. ಆದರೆ, ಕಂಡಕ್ಟರ್ ಮಾತ್ರ ತನ್ನ ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದಾರೆ. ಕಂಡಕ್ಟರ್‌ಗಳು ಹತಾಶರಾಗಿ ಸಾರಿಗೆ ಸಚಿವರನ್ನು ಸಹಾಯಕ್ಕಾಗಿ ಕೈ ಮುಗಿದು ಕೇಳಿಕೊಳ್ಳುತ್ತಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಶಕ್ತಿ ಯೋಜನೆ ತುಂಬಾ ಸೂಕ್ತವಾಗಿದೆ. ಆದಾಗ್ಯೂ, ಆದರೆ ಅದೇ ಯೋಜನೆ ನಿರ್ವಾಹಕರ ಕೆಲಸಕ್ಕೆ ಒತ್ತಡವನ್ನು ಉಂಟುಮಾಡುತ್ತಿದೆ.
ಮಹಿಳಾ ಪ್ರಯಾಣಿಕರು ಯಾವ ಸ್ಥಳಕ್ಕೆ ಹೋಗಬೇಕೋ, ಅಲ್ಲಿಗೆ ಶೂನ್ಯ ದರದ ಟಿಕೆಟ್ ಪಡೆದು, ಬೇರೊಂದು ನಿಲ್ದಾಣಗಳಲ್ಲಿ ಇಳಿದು ಹೋಗುತ್ತಿದ್ದಾರೆ.
ಈ ವೇಳೆ ಟಿಕೆಟ್ ಚೆಕ್ಕಿಂಗ್ ಇನ್ಸ್‌ಪೆಕ್ಟರ್ ಬಂದು ಪರಿಶೀಲಿಸಿದಾಗ, ಪ್ಯಾಸೆಂಜರ್ ಇರುವುದಿಲ್ಲ. ಆದರೆ ಟಿಕೆಟ್ ರಿಸಿವ್ ಆಗಿರುತ್ತದೆ. ಇದಕ್ಕೆ ಕಂಡಕ್ಟರ್‌ಗಳನ್ನು ಹೊಣೆಯಾಗಿಸಿ, ತನಿಖಾಧಿಕಾರಿಗಳು ಅಮಾನತು ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಇದರಿಂದ ತಪ್ಪು ಮಾಡದಿದ್ದರೂ ಕಂಡಕ್ಟರ್‌ಗಳು ಶಿಕ್ಷೆ ಅನುಭವಿಸುತ್ತಿದ್ದಾರೆ.