ಶಿವಮೊಗ್ಗದ ಘಟನೆ ಪೂರ್ವ ಯೋಜಿತ: ಚಕ್ರವರ್ತಿ ಸೂಲಿಬಲೆ

ಹೊಸದಿಗಂತ ವರದಿ,ಅಂಕೋಲಾ:

ಗಲಾಟೆ ಮಾಡುವಂತ ಮತಾಂಧರನ್ನು ಜೈಲಿನಿಂದ ಬಿಡಿಸಿ ಹಾರ ಹಾಕಿ ಸ್ವಾಗತಿಸುವ ಸರ್ಕಾರ ಅಧಿಕಾರದಲ್ಲಿ ಇರುವಾಗ ಶಿವಮೊಗ್ಗದಲ್ಲಿ ನಡೆದಂತಹ ಘಟನೆಗಳು ನಾಡಿನ ಮೂಲೆ ಮೂಲೆಗಳಲ್ಲೂ ನಡೆಯಬಹುದು ಎಂದು ನಮೋ ಬ್ರಿಗೇಡ್ ಪ್ರಮುಖ, ಬರಹಗಾರ ಚಕ್ರವರ್ತಿ ಸೂಲಿಬಲೆ ಹೇಳಿದರು.

ತಾಲೂಕಿನ ನಮೋ ಬ್ರಿಗೇಡ್ ವತಿಯಿಂದ ನಡೆದ ಜನ ಗಣ ಮನ ಬೆಸೆಯೋಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಶಿವಮೊಗ್ಗದ ಘಟನೆ ಪೂರ್ವ ಯೋಜಿತ ಹಿಂದು ಸಮಾಜವನ್ನು ಪ್ರಚೋದಿಸಲೆಂದೇ ಗಲಾಟೆ ನಡೆಸಲಾಗಿದೆ ಔರಂಗಜೇಬನ ದೊಡ್ಡ ಕಟೌಟ್, ಇಡೀ ಭಾರತವನ್ನು ಹಸಿರಾಗಿ ತೋರಿಸಿರುವುದು, ಪ್ರಚೋದನಕಾರಿ ಬರಹಗಳು ಇವೆಲ್ಲದರ ಮೂಲಕ ಹಿಂದುಗಳನ್ನು ಕೆರಳಿಸುವ ಪ್ರಯತ್ನ ಮಾಡಲಾಗಿತ್ತು ಆದರೆ ಹಿಂದುಗಳು ಇದನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಮತಾಂಧರು ಪೊಲೀಸರೊಂದಿಗೆ ಕಿತ್ತಾಟಕ್ಕೆ ಇಳಿದಿದ್ದಾರೆ ಪೊಲೀಸ್ ವರಿಷ್ಠರಂತ ಉನ್ನತ ಅಧಿಕಾರಿಗಳು ಏಟು ತಿನ್ನುವ ಪರಿಸ್ಥಿತಿ ನಿರ್ಮಾಣ ಮಾಡಲಾಯಿತು.

ಮತಾಂಧರ ಸಹಜ ಮಾನಸಿಕತೆಯೇ ಕಿತ್ತಾಟ ಮಾಡುವ ಮೂಲಕ ಗಲಭೆಯನ್ನು ಸೃಷ್ಟಿ ಮಾಡುವುದಾಗಿದ್ದು ಇದಕ್ಕೆ ಪೂರಕವಾಗಿ ಗೃಹ ಸಚಿವರು ಮುಖ್ಯ ಮಂತ್ರಿಗಳು ಸೇರಿದಂತೆ ಇಡೀ ಸರ್ಕಾರ ಅವರ ಪರ ನಿಂತು ರಕ್ಷಣೆಗೆ ಪಣ ತೊಟ್ಟು ನಿಂತಾಗ ಇಂಥ ಗಲಭೆಗಳು ನಮ್ಮ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಹಿಂದುಗಳು ಜಾಗೂರುಕತೆಯಿಂದ ಇರಬೇಕು ಎಂದು ಅವರು ಕರೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!