ಸರ್ಕಾರಿ ಯೋಜನೆಗಳ ಅರಿವು ಹೆಚ್ಚಿಸಿದ ಪ್ರಧಾನಿ ಮೋದಿಯ ಮನ್ ಕಿ ಬಾತ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮಾಸಿಕ ರೇಡಿಯೋ ಕಾರ್ಯಕ್ರಮ ಒಂಬತ್ತು ವರ್ಷ ಪೂರ್ಣಗೊಂಡಿದ್ದು, ಈ ಹಿನ್ನೆಲೆ ಮನ್ ಕಿ ಬಾತ್‌ನಲ್ಲಿ (Mann Ki Baat) ಒಳಗೊಂಡಿರುವ ಕೆಲವು ವಿಷಯಗಳು ಮತ್ತು ಅವುಗಳ ಸಾಮಾಜಿಕ ಪ್ರಭಾವವನ್ನು ಎತ್ತಿ ತೋರಿಸುವ ಅಧ್ಯಯನವನ್ನು ಪ್ರಧಾನಿ ಮೋದಿ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಐಐಎಂ ಬೆಂಗಳೂರು ನಡೆಸಿದ ಸಂಶೋಧನಾ ಕಾರ್ಯವು ಪ್ರಧಾನಿಯವರ ಮನ್ ಕಿ ಬಾತ್‌ನ 105 ಸಂಚಿಕೆಗಳ ಪ್ರಭಾವವನ್ನು ಅಧ್ಯಯನ ಮಾಡಿದೆ.

ಮನ್ ಕಿ ಬಾತ್ 9 ವರ್ಷಗಳನ್ನು ಪೂರೈಸುತ್ತಿರುವಾಗ, ಸ್ಟೇಟ್ ಆಫ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಆಸಕ್ತಿದಾಯಕ ಅಧ್ಯಯನ ಇಲ್ಲಿದೆ. ಕೆಲವು ವಿಷಯಗಳು ಮತ್ತು ಅವುಗಳ ಸಾಮಾಜಿಕ ಪ್ರಭಾವವನ್ನು ಎತ್ತಿ ತೋರಿಸುತ್ತದೆ. ಈ ಮಾಧ್ಯಮದ ಮೂಲಕ ನಾವು ಹಲವಾರು ಜೀವನ ಪ್ರಯಾಣಗಳನ್ನು ಮತ್ತು ಸಾಮೂಹಿಕ ಪ್ರಯತ್ನಗಳನ್ನು ಹೇಗೆ ಆಚರಿಸಿದ್ದೇವೆ ಎಂಬುದು ಕಾಣುತ್ತದೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

SBI ಮತ್ತು IIM-ಬೆಂಗಳೂರಿನ ಸಂಶೋಧನಾ ಕಾರ್ಯವು ಕಳೆದ 9 ವರ್ಷಗಳಲ್ಲಿ ಪ್ರಧಾನಿ ಮೋದಿಯವರ ಮನ್ ಕಿ ಬಾತ್‌ನ 105 ಸಂಚಿಕೆಗಳ ಪ್ರಭಾವದ ವಿಶ್ಲೇಷಣೆ ಮಾಡಿದೆ. ಇದರ ಪ್ರಕಾರ ಮನ್ ಕಿ ಬಾತ್ ಎಂಬ ಶಕ್ತಿಯುತ ಮತ್ತು ಕಾರ್ಯತಂತ್ರದ ಸಂವಹನ ಮಾಧ್ಯಮದಿಂದ ತಂದ ಬದಲಾವಣೆಗಳ ಶಾಶ್ವತ ಪರಿಣಾಮವನ್ನು ನಿರ್ಣಯಿಸಿದೆ. ಈ ವರದಿಯು ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ (NLP) ಅನ್ನು ಬಳಸಿಕೊಂಡು ಮನ್ ಕಿ ಬಾತ್‌ನ ನೀತಿ ಪರಿಣಾಮಗಳನ್ನು ವಿಶ್ಲೇಷಿಸುವುದರ ಮೇಲೆ ಕೇಂದ್ರೀಕರಿಸಿದೆ.

ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯು ಜನವರಿ 2015 ರಲ್ಲಿ ಪ್ರಾರಂಭವಾಯಿತು, ಜನವರಿ 2015 ರಲ್ಲಿ ಮನ್ ಕಿ ಬಾತ್ ನಲ್ಲಿ ಇದರ ಪ್ರಸ್ತಾಪ ಆದ ನಂತರ ಇದು ಗೂಗಲ್ ಹುಡುಕಾಟಗಳಲ್ಲಿ ಜನಪ್ರಿಯತೆಯನ್ನು ಗಳಿಸಿತು. ಇದು 2 ವರ್ಷಗಳ ನಿರಂತರ ಮನ್ ಕಿ ಬಾತ್ ಉಲ್ಲೇಖಗಳ ನಂತರ ಗೂಗಲ್ ಹುಡುಕಾಟಗಳ ಜನಪ್ರಿಯತೆಯನ್ನು ಗಳಿಸಿದೆ.

ಮನ್ ಕಿ ಬಾತ್‌ನ ಪ್ರಭಾವ

ಬೇಟಿ ಬಚಾವೋ ಬೇಟಿ ಪಢಾವೋ ಅಭಿಯಾನ
ಬೇಟಿ ಬಚಾವೋ ಬೇಟಿ ಪಢಾವೋ ಅಭಿಯಾನದ ಭಾಗವಾಗಿ ಪ್ರಾರಂಭಿಸಲಾದ ಸುಕನ್ಯಾ ಸಮೃದ್ಧಿ ಯೋಜನೆ (SSY), ಭಾರತ ಸರ್ಕಾರದ ಸಣ್ಣ ಠೇವಣಿ ಯೋಜನೆಯು ಹೆಣ್ಣು ಮಗುವಿಗೆ ಮಾತ್ರ ಮೀಸಲಾಗಿದೆ.

ಯೋಗ
ಅನಾದಿ ಕಾಲದಿಂದಲೂ ಯೋಗ ಇರುವ ಪದ. ಡಿಸೆಂಬರ್ 14 ರಂದು ಮನ್ ಕಿ ಬಾತ್ ನಂತರ ಗೂಗಲ್ ಹುಡುಕಾಟಗಳಲ್ಲಿ ಯೋಗ ಜನಪ್ರಿಯತೆಯನ್ನು ಗಳಿಸಿತು. ಆದರೆ ಮೇ ಮತ್ತು ಜೂನ್ 2015 ರಲ್ಲಿ ಮನ್ ಕಿ ಬಾತ್‌ನಲ್ಲಿ ಸಂವಹನದ ನಂತರ, ಇದರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ ನಮ್ಮ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಖಾದಿ ಅಪಾರ ಜನಪ್ರಿಯತೆಯನ್ನು ಗಳಿಸಿತು, ಆದರೆ ಬದಲಾಗುತ್ತಿರುವ ಕಾಲದೊಂದಿಗೆ ಅದು ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ. ಮನ್ ಕಿ ಬಾತ್‌ನೊಂದಿಗೆ, ಖಾದಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ, ಜೊತೆಗೆ ಮಾರಾಟದಲ್ಲಿ ಹೆಚ್ಚಳವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಖಾದಿಯ ಪ್ರಸಾರವೂ ಹೆಚ್ಚಾಗಿದೆ ಎಂದು ತಿಳಿಸಿದೆ .

ಮುದ್ರಾ ಲೋನ್ ಅಪ್ಲಿಕೇಶನ್
ನವೆಂಬರ್ 15 ರ ಮನ್ ಕಿ ಬಾತ್‌ಗಳ ನಂತರ ಮುದ್ರಾ ಲೋನ್ ಅಪ್ಲಿಕೇಶನ್ ಹುಡುಕಾಟವು ಗೂಗಲ್ ಹುಡುಕಾಟದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ.

ಅಲ್ಲಿವರೆಗೆ ಕಡಿಮೆ ಸರ್ಚ್ ಆಗಿದ್ದ ಸಿರಿಧಾನ್ಯ ಹುಡುಕಾಟಗಳು 2022 ರ ಪ್ರಾರಂಭದೊಂದಿಗೆ ಮತ್ತೆ ಹೆಚ್ಚಿನ ಹುಡುಕಾಟ ಪಡೆದಿದೆ. ಇದು,ಹಿಂದಿನ ಸರಾಸರಿ ಸರ್ಚ್ ರಿಸಲ್ಟ್ 0.026 ರಿಂದ 55.77 ಕ್ಕೆ ಹೆಚ್ಚಿಸಿತು.ಫೆಬ್ರವರಿ 2020 ರಲ್ಲಿ ಇದನ್ನು ಪ್ರಸ್ತಾಪಿಸಿದಾಗಿನಿಂದ ಪಿಎಂ ಸ್ವನಿಧಿ ಗೂಗಲ್​​ನಲ್ಲಿ ಹೆಚ್ಚು ಬಾರಿ ಹುಡಕಲ್ಪಟ್ಟಿದೆ.

ಪ್ರವಾಸೋದ್ಯಮ
ದೇಶದಲ್ಲಿರುವ ಪಾರಂಪರಿಕ ದೀಪಸ್ತಂಭಗಳನ್ನು ಪ್ರವಾಸೋದ್ಯಮ ಕೇಂದ್ರಗಳನ್ನಾಗಿ ಪರಿವರ್ತಿಸುವ ಗುರಿಯನ್ನು ಭಾರತ ಹೊಂದಿದೆ. ದೇಶವು 65 ಲೈಟ್‌ಹೌಸ್‌ಗಳನ್ನು ಹೊಂದಿದ್ದು, ಸರ್ಕಾರವು ಕೆಲಸ ಮಾಡಲು ಮತ್ತು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ಗುರಿ ಹೊಂದಿದೆ.

ಕೋವಿಡ್
ಮನ್ ಕಿ ಬಾತ್ ಮೂಲಕ ನಿರಂತರ ಧನಾತ್ಮಕ ಸಂವಹನದೊಂದಿಗೆ ಸರಾಸರಿ ಕೋವಿಡ್ ಪ್ಯಾನಿಕ್ ಇಂಡೆಕ್ಸ್ 2020-22 ಭಾರತದಲ್ಲಿ ಅತ್ಯಂತ ಕಡಿಮೆಯಾಗಿದೆ. ಮನ್ ಕಿ ಬಾತ್‌ನಲ್ಲಿ ಪ್ರಸ್ತಾಪಿಸಿದ ನಂತರ ಅಕ್ಟೋಬರ್ 2018 ರಿಂದ ಏಕತೆಯ ಪ್ರತಿಮೆಗೆ ಸಂಬಂಧಿಸಿದ ಹುಡುಕಾಟಗಳು ಹೆಚ್ಚಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!