ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂ ನ ಕರೀಂಗಂಜ್ ಜಿಲ್ಲೆಯ ಸೂರಜನ್ ರಾಯ್ ಎಂಬ ಯುವಕ ಬೈಕ್ ಖರೀದಿಸಲು ಶೋ ರೂಮ್ ಗೆ ಬಂದಿದ್ದು, ಈ ವೇಳೆ ಆತ ನೀಡಿದ ಹಣ ಕಂಡು ಶೋ ರೂಮ್ ಸಿಬ್ಬಂದಿ ದಂಗಾಗಿದ್ದಾರೆ.
ಕಾರಣ ಆತ ಖೋಟಾ ನೋಟುಗಳನ್ನೇನು ನೀಡಿದ್ದಾನೆ ಎಂದು ಅಲ್ಲ. ಬದಲಾಗಿ ಕಾಯಿನ್ ಗಳ ಮೂಲಕ ಹಣ ಪಾವತಿಸಿದ್ದಾನೆ.
ಹೌದು, ಕರೀಂಗಂಜ್ ಜಿಲ್ಲೆಯ ಸೂರಜನ್ ರಾಯ್ ತನ್ನ ಕನಸಿನ ಬೈಕ್ ಖರೀದಿಸಲು ವರ್ಷಗಟ್ಟಲೆ ಕೂಡಿಟ್ಟ ಕಾಯಿನ್ ಗಳ ಮೂಲಕ ಹಣ ಪಾವತಿಸಿದ್ದಾನೆ. ಇದಕ್ಕಾಗಿ ಆತ 50,000 ರೂಪಾಯಿಗಳಿಗೂ ಅಧಿಕ ಮೊತ್ತದ ಕೂಡಿಟ್ಟ ಒಂದು ರೂಪಾಯಿ, ಎರಡು ರೂಪಾಯಿ, ಐದು ರೂಪಾಯಿ, ಹತ್ತು ರೂಪಾಯಿ ಮೌಲ್ಯದ ಕಾಯಿನ್ ಗಳನ್ನು ತಂದಿದ್ದಾನೆ.
ಈತನಿಗೆ ಸ್ಪಂದಿಸಿದ ಶೋರೂಮ್ ಸಿಬ್ಬಂದಿ, ಕಾಯಿನ್ ಗಳನ್ನು ಪಡೆದು ಗಂಟೆಗಟ್ಟಲೆ ಎಣಿಸಿ ಆತ ಇಷ್ಟಪಟ್ಟ ಅಪಾಚೆ 460 ವಿ ಬೈಕನ್ನು ನೀಡಿದ್ದಾರೆ.
ಇದರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.