ಸೈಟ್‌ ವಾಪಾಸ್‌ ಕೊಟ್ಟಾಗಿದೆ, ಸೋ ವಿಷಯ ಇಲ್ಲಿಗೆ ಬಿಟ್ಹಾಕಿ: ಸಚಿವ ಎನ್.ಎಸ್.ಬೋಸರಾಜು

ಹೊಸದಿಗಂತ ವರದಿ ರಾಯಚೂರು :

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಈಗಾಗಲೇ ಮೂಡಾಗೆ ಸೈಟುಗಳನ್ನು ಹಿಂದುಗಿಸುವ ಮೂಲಕ ಈ ಪ್ರಕರಣ ಅಂತ್ಯ ಕಂಡಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ಬುಧವಾರ ನಗರದಲ್ಲಿನ ಗಾಂಧಿ ಪ್ರತಿಮೆ ಬಳಿ ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಮುಖ್ಯಮಂತ್ರಿ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರು ತಮ್ಮ ಪತಿ ಮೇಲೆ ಇಲ್ಲಿಯವರ ಯಾವುದೇ ಕಳಂಕ ಬಂದಿಲ್ಲ ಇನ್ನು ಮುಂದೆ ಅವರಿಗೆ ಯಾವುದೇ ಕಳಂಕ ಬರಬಾರದು ಎಂಬ ಕಾರಣಕ್ಕೆ ಕಾನೂನು ಬದ್ಧವಾಗಿ ಬಂದಿದ್ದ ಸೈಟಗಳನ್ನು ಹಿಂದುರುಗಸಿದ್ದಾರೆ.

ಆದರೆ, ಬಿಜೆಪಿ ಮತ್ತು ಜೆಡಿಎಸ್ ನವರು ರಾಜಕೀಯ ಕಾರಣಕ್ಕೆ ಮೂಡಾ ಹಣಗರಣವನ್ನು ಜೀವಂತವಾಗಿಡುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಎರಡೂ ಪಕ್ಷಗಳಿಗೆ ರಾಜ್ಯದ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ. ರಾಜ್ಯದಲ್ಲಿ ಮತ್ತೊಮ್ಮೆ ಕುತಂತ್ರದಿಂದ ಅಧಿಕಾರ ಹಿಡಿಯಬೇಕೆಂಬ ಹುನ್ನಾರ ಇದಾಗಿದೆ ಎಂದರು.

ನಮ್ಮ ಪಕ್ಷದವರು ಮತ್ತೆ ರಾಜ್ಯದಲ್ಲಿನ ಸರ್ಕಾರವನ್ನು ಕೆಡವಿ ಮತ್ತೆ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಬೇಕಂದು ಒಂದು ಸಾವಿರ ಕೋಟಿ ಹಣವನ್ನು ಇಟ್ಟುಕೊಂಡು ಕುಳಿತಿದ್ದಾರೆ ಎಂದು
ಬಿಜೆಪಿಯ ಹಿರಿಯ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಅವರೆ ಹೇಳಿದ್ದಾರೆ ಎಂದರೆ ಪ್ರಸಕ್ತದ ಎಲ್ಲ ಘಟನಾವಳಿಗಳಿಗೆ ಇದು ಕಾರಣವಾಗಿರಬಹುದು ಎಂದು ತಿಳಿಸಿದರು.

ಮುಖ್ಯಮಂತ್ರಿಯವರ ಸ್ನೇಹಿತ ವಿದೇಶದಿಂದ ಬಂದ ಸಂದರ್ಭದಲ್ಲಿ ಬೆಲೆ ಬಾಳುವ ವಾಚ್ ಉಡುಗೊರೆಯಾಗಿ ನೀಡಿದ್ದರು ಆಗಲೂ ಇದೇ ರೀತಿ ವಿರೋಧ ಪಕ್ಷದವರು ವಿವಾದ ಸೃಷ್ಟಿಸಿದರು. ಆಗ ಯಾವ ವಿವಾದವು ಬೇಡ ಎಂದು ವಾಚನ್ನು ಸರ್ಕಾರಕ್ಕೆ ನೀಡಿದ್ದರು ಅದರಂತೆ ಅವರ ಪತ್ನಿ ಈಗ ಸೈಟಗಳನ್ನು ಹಿಂದುರಿಗಿಸಿದ್ದಾರೆ. ಕುಮಾರಸ್ವಾಮಿ ಅವರ ಕುಟುಂಬದ ಹಾಗೆ ಸಾವಿರಾರು ಕೋಟಿ ರೂಗಳನ್ನು ಕಬಳಿಸಲು ಮುಂದಾಗಿಲ್ಲ. ಯಡಿಯೂರಪ್ಪ ಅವರ ಬ್ಯಾಂಕ್ ಖಾತೆಗೆ ೮ ಕೋಟಿ ಹಣ ಜಮಾ ಆಗಿತ್ತು, ಒಂದು ಎಕರೆಗೂ ಅಧಿಕ ಜಾಗೆಯನ್ನು ಸತ್ತವರ ಹೆಸರಲ್ಲಿ ನೊಂದಣಿ ಮಾಡಲಾಗಿತ್ತು ಹೀಗಾಗಿ ಆಗ ರಾಜೀನಾಮೆಗೆ ಆಗ್ರಹಿಸಲಾಗಿತ್ತು. ಈಗ ಪಾರ್ವತಿ ಸಿದ್ದರಾಮಯ್ಯ ಅವರು ಸೈಟಗಳನ್ನು ಹಿಂದುರಿಗಿಸಿದ್ದಾರೆ ಅಂದರೆ ಪ್ರಕರಣ ಮುಗಿದಂತೆ ಎಂದು ತಿಳಿಸಿದರು.

ಪ್ರಸಕ್ತ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರಿಗೆ ರಾಜ್ಯದ ಜನತೆಯ ಕುಂದು ಕೊರತೆಗಳ ಕುರಿತು ಚಿಂತನೆ ಇಲ್ಲ. ರಸ್ತೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಕುರಿತು ಚಿಂತನೆ ಮಾಡದೇ ಕಾಂಗ್ರೆಸ್ ಪಕ್ಷದ ಮೇಲೆ ಕುತುಂತ್ರದ ರಾಜಕಾರಣ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ ಎಂದು ಹರಿಹಾಯ್ದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!