ಹದಗೆಟ್ಟಿದೆ ಚೀನಾ ಪರಿಸ್ಥಿತಿ: ಪ್ರತಿದಿನ 10 ಲಕ್ಷ ಕೇಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದಲ್ಲಿ ಕೊರೋನಾದಿಂದಾಗಿ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು, ದಿನಕ್ಕೆ 10 ಲಕ್ಷ ಕೊರೋನಾ ಕೇಸ್ ದಾಖಲಾಗುತ್ತಿದೆ. ಪ್ರತಿ ದಿನ ಐದು ಸಾವಿರಕ್ಕೂ ಹೆಚ್ಚು ಮಂದಿ ಮೃತಪಡುತ್ತಿದ್ದಾರೆ.

ಏರ್‌ಫಿನಿಟಿ ಲಿ ಸಂಸ್ಥೆ ಅನ್ವಯ ಚೀನಾದಲ್ಲಿ ಪ್ರತಿದಿನ 10 ಲಕ್ಷ ಮಂದಿಗೆ ಸೋಂಕು ತಗುಲುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಜನವರಿಯಲ್ಲಿ ಕೇಸ್‌ಗಳ ಸಂಖ್ಯೆ 37 ಲಕ್ಷಕ್ಕೆ ಏರಿಕೆಯಾಗಲಿದೆ. ಮಾರ್ಚ್ ವೇಳೆಗೆ ಈ ಸಂಖ್ಯೆ 42 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಜಗತ್ತಿನ ಯಾವುದೇ ದೇಶದಲ್ಲಿ ಇಷ್ಟು ವೇಗವಾಗಿ ಪ್ರಕರಣಗಳ ಸಂಖ್ಯೆ ಏರಿಕೆಯಾಗಿಲ್ಲ ಎನ್ನಲಾಗಿದೆ. ಚೀನಾದ ಪ್ರಮುಖ ನಗರ ಶಾಂಘೈನಲ್ಲಿ ಒಟ್ಟು 54 ಲಕ್ಷ ಮಂದಿ ಕೊರೋನಾ ಸೋಂಕಿತರಿದ್ದಾರೆ. ಐಸಿಯು ಹಾಗೂ ವಾರ್ಡ್‌ಗಳು ಭರ್ತಿಯಾಗಿದ್ದು, ಚೀನಾ ಪರಿಸ್ಥಿತಿ ಸಂಕಷ್ಟದಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!