ಬಿ2ಬಿ ಹೋಲ್‌ಸೇಲ್‌ ವ್ಯಾಪಾರಿ ಮಳಿಗೆ ʼಮೆಟ್ರೋʼವನ್ನು ಸ್ವಾಧೀನಪಡಿಸಿಕೊಳ್ಳಲಿದೆ ರಿಲಯನ್ಸ್‌ ರೀಟೇಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ಪ್ರಸಿದ್ಧ ಬಿಸ್ನೆಸ್‌ ಟು ಬಿಸ್ನೆಸ್‌ ಸಗಟು ವ್ಯಾಪರಿ ಮಳಿಗೆಯಾದ ಮೆಟ್ರೋ ಕ್ಯಾಶ್ & ಕ್ಯಾರಿ ಇಂಡಿಯಾ (ಮೆಟ್ರೋ ಇಂಡಿಯಾ)ವನ್ನು 2,850 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಳ್ಳಲು ರಿಲಯನ್ಸ್ ಇಂಡಸ್ಟ್ರೀಸ್‌ನ ರಿಟೇಲ್ ಅಂಗವಾದ ರಿಲಯನ್ಸ್ ರಿಟೇಲ್ ವೆಂಚರ್ಸ್ ಒಪ್ಪಂದ ಮಾಡಿಕೊಂಡಿದೆ.
ಮೆಟ್ರೋ ಇಂಡಿಯಾವು ಜರ್ಮನ್ ಕಂಪನಿ ಮೆಟ್ರೋ AG ಯ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ ಮತ್ತು ದೇಶದಾದ್ಯಂತ 21 ನಗರಗಳಲ್ಲಿ 31 ದೊಡ್ಡ ಸ್ವರೂಪದ ಮಳಿಗೆಗಳನ್ನು ‘ಮೆಟ್ರೋ’ ಬ್ರಾಂಡ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಬಿಸಿನೆಸ್-ಟು-ಬಿಸಿನೆಸ್ (B2B) ವಿಭಾಗವನ್ನು ಪೂರೈಸುತ್ತದೆ. ಸುಮಾರು 3 ಮಿಲಿಯನ್ ಗ್ರಾಹಕರನ್ನು ಮೆಟ್ರೋ ಹೊಂದಿದೆ.

ರಿಯನ್ಸ್‌ ನ ಈ ಸ್ವಾಧೀನವು ಮೆಟ್ರೋ ವ್ಯಾಪಾರಿ ಮಳಿಗೆಯ ಪೂರೈಕೆ ಸರಪಳಿ ನೆಟ್‌ವರ್ಕ್‌ಗಳು, ತಂತ್ರಜ್ಞಾನ ವೇದಿಕೆಗಳು ಮತ್ತು ಸೋರ್ಸಿಂಗ್ ಸಾಮರ್ಥ್ಯಗಳನ್ನು ಹೆಚ್ಚಿಸಲಿದೆ. ದಕ್ಷತೆಯನ್ನು ಹೆಚ್ಚಿಸುವ ಮೂಲಕ ಗ್ರಾಹಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ಉತ್ತಮ ಸೇವೆ ನೀಡುವ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುತ್ತದೆ” ಎಂದು ಮೆಟ್ರೋ ಹಾಗು ರಿಲಯನ್ಸ್‌ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಈ ಒಪ್ಪಂದದ ಅಡಿಯಲ್ಲಿ ಲಯನ್ಸ್ ರಿಟೇಲ್ ಮೆಟ್ರೋ ಇಂಡಿಯಾದ 100ಶೇ. ಈಕ್ವಿಟಿಯನ್ನು ಸ್ವಾಧೀನಪಡಿಸಿಕೊಳ್ಳಲಿದೆ. ನಿಯಂತ್ರಕ ಅನುಮತಿಗಳಿಗೆ ಒಳಪಟ್ಟು ಮಾರ್ಚ್ 2023 ರ ವೇಳೆಗೆ ಒಪ್ಪಂದವು ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ ಎಂದು ಎರಡು ಕಂಪನಿಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!