ಆಕಾಶ ಸಂಪೂರ್ಣ ಸುರಕ್ಷಿತ: ವಿಮಾನಗಳ ಮೇಲಿನ ಹುಸಿ ಬಾಂಬ್ ಬೆದರಿಕೆಗೆ ಕೇಂದ್ರ ಸರಕಾರ ಭರವಸೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಗಳು ಹೆಚ್ಚುತ್ತಿದ್ದು, ಬುಧವಾರ ಕೂಡ ದೆಹಲಿಯಿಂದ ಬೆಂಗಳೂರಿಗೆ ಹಾರುತ್ತಿದ್ದ ಆಕಾಶ ಏರ್ ವಿಮಾನಗೂ ಬೆದರಿಕೆ ಬಂದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಮರಳಿ ಲ್ಯಾಂಡ್ ಮಾಡಲಾಗಿದೆ.

ತುರ್ತು ಪ್ರತಿಕ್ರಿಯೆ ತಂಡಗಳು ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿವೆ ಮತ್ತು ವಿಮಾನ “ದೆಹಲಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಲು ಅಗತ್ಯವಿರುವ ಎಲ್ಲಾ ತುರ್ತು ಕಾರ್ಯವಿಧಾನಗಳನ್ನು” ಕ್ಯಾಪ್ಟನ್ ಅನುಸರಿಸಿದ್ದಾರೆ ಎಂದು ಆಕಾಶ ಏರ್ ಹೇಳಿದೆ.

ಮತ್ತೊಂದು ವಿಮಾನ, ಮುಂಬೈನಿಂದ ದೆಹಲಿಗೆ ಹಾರುತ್ತಿದ್ದ ದೇಶೀಯ ವಿಮಾನಯಾನ ಇಂಡಿಗೋ ಗುಜರಾತ್‌ನ ಅಹಮದಾಬಾದ್‌ಗೆ ತಿರುಗಿಸಲಾಗಿದೆ.

ಸರಣಿ ಬಾಂಬ್ ಬೆದರಿಕೆ ಬಗ್ಗೆ, ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​ಸೆಕ್ಯುರಿಟಿ(BCAS)ನ ಮಹಾನಿರ್ದೇಶಕ ಜುಲ್ಫಿಕರ್ ಹಸನ್ ಅವರು ಪ್ರತಿಕ್ರಿಯಿಸಿದ್ದು, “ಭಾರತೀಯ ಆಕಾಶವು ಸಂಪೂರ್ಣವಾಗಿ ಸುರಕ್ಷಿತವಾಗಿದೆ” ಮತ್ತು ಪೊಲೀಸರು ಅಪರಾಧಿಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಬೆದರಿಕೆ ಸಂದೇಶಗಳ ಹಿಂದಿರುವ ಎಲ್ಲರನ್ನು ಪತ್ತೆಹಚ್ಚುವ ವಿಶ್ವಾಸವಿದೆ ಮತ್ತು ಅವರ ವಿರುದ್ಧ ಕಾನೂನಿನಡಿಯಲ್ಲಿ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹಸನ್ ಅವರು ತಿಳಿಸಿದ್ದಾರೆ.
ಸೋಮವಾರದಿಂದ ಇದುವರೆಗೆ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳಿಗೆ 12 ಬಾಂಬ್ ಬೆದರಿಕೆಗಳು ಬಂದಿವೆ. ಇದರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಬೆದರಿಕೆ ಸಂದೇಶಗಳನ್ನು ಪೋಸ್ಟ್ ಮಾಡಲಾಗಿದೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!