ಶಿವಮೊಗ್ಗದಲ್ಲಿ ಕಾಯ೯ಕತ೯ನ ಹತ್ಯೆ: ಕಲಬುರಗಿಯಲ್ಲಿ ವ್ಯಾಪಕ ಖಂಡನೆ

ಹೊಸದಿಗಂತ ವರದಿ, ಕಲಬುರಗಿ:

ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾಯ೯ಕತ೯ ಹಷ೯ ಹತ್ಯೆ ಖಂಡಿಸಿ, ಶ್ರೀ ರಾಮ ಸೇನೆಯ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ನಂತರ ಮಾತನಾಡಿದ ಶ್ರೀ ರಾಮ ಸೇನೆಯ ಜಿಲ್ಲಾಧ್ಯಕ್ಷ ಮಹೇಶ್ ಗೊಬ್ಬುರ,ಅತ್ಯಂತ ಭೀಕರವಾಗಿ ಹಾಗೂ ರಾಕ್ಷಸಿಯವಾಗಿ ಹತ್ಯೆ ಮಾಡಿರುವುದು ನಿಜಕ್ಕೂ ಹೇಯ ಕೃತ್ಯ. ಕಳೆದ ಹಲವಾರು ವರ್ಷಗಳಿಂದ ಆ ಯುವಕನಿಗೆ ಎಸ್.ಡಿ.ಪಿ.ಐ,ಪಿ.ಎಫ್.ಐ,ಸಿ.ಎಫ್.ಐ ಸಂಘಟನೆಗಳು ಹತ್ಯೆಗೆ ಸಂಚು ನಡೆದಿದ್ದರೂ,ರಕ್ಷಣೆ ನೀಡದಿರುವುದು ಸರಕಾರದ ನಾಚಿಕೆಗೇಡಿತನ ಸಂಗತಿಯಾಗಿದೆ ಎಂದರು.

ಎರಡು ಮೂರು ವಷ೯ಗಳಲ್ಲಿ ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಿಂದೂಗಳ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದ್ದರು,ಸಕಾ೯ರದ ದಿವ್ಯ ನಿರ್ಲಕ್ಷ್ಯ ಧೋರಣೆ ಕಾರಣವಾಗಿದೆ. ವಿರೋಧ ಪಕ್ಷದಲ್ಲಿದ್ದಾಗ ಭಯೋತ್ಪಾದನೆ ಹಿನ್ನೆಲೆಯಲ್ಲಿ ಮೇಲಿನ ಸಂಘಟನೆ ಗಳನ್ನು ನಿಷೇಧಿಸುವಂತೆ ಆಗ್ರಹಿಸಿ,ಈಗ ತಾವೇ ಅಧಿಕಾರದಲ್ಲಿದ್ದರೂ ನಿಷೇಧಿಸದೇ ಇರುವುದು ಸರಕಾರದ ಮೇಲೆ ಸಂಶಯ ಹುಟ್ಟುಹಾಕುತ್ತಿದೆ ಎಂದರು.

ಕೂಡಲೇ ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸಿ,ಅದರ ಪ್ರಮುಖರನು ಬಂಧಿಸಬೇಕು. ಮೃತನ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು. ಹಿಂದೂ ಕಾಯ೯ಕತ೯ರಿಗೆ ಹಿಂದೂ ನಾಯಕರಿಗೆ ಸೂಕ್ತ ಭದ್ರತೆ ನೀಡಬೇಕೂ ಎಂದು ಹೇಳಿದ ಅವರು, ಮೇಲಿನ ಬೇಡಿಕೆಗಳನ್ನು ಪೂರ್ಣ ಗೊಳಿಸದೇ ಇದ್ದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!