ಪ್ರಕಾಶ ಲೋನಾರೆ ಮೇಲೆ ಹಲ್ಲೆ : 24 ಗಂಟೆಯಲ್ಲಿ ಮೂವರ ಬಂಧನ

ಹೊಸದಿಗಂತ ವರದಿ, ಬಾಗಲಕೋಟೆ:

ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಕಾಮೆಂಟ್ಗಳಿಂದಾಗಿ ಫೆ.19ರಂದು ನಗರದ ಕೃಷ್ಣಾ ಚಿತ್ರಚಿತ್ರಮಂದಿರ ಬಳಿ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸಾರ್ ತಿಳಿಸಿದ್ದಾರೆ.

ನಗರದ ಪ್ರಕಾಶ ನಾಗೇಶ ಲೋನಾರಿಯವರು ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ 24 ಗಂಟೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿಯವರು ತಿಳಿಸಿದ್ದಾರೆ.

ಪ್ರಕಾಶ ಲೋನಾರೆ ಆರೋಗ್ಯ ವಿಚಾರಿಸಿದ ಗಣ್ಯರು 

ಪ್ರಕಾಶ ಲೋನಾರೆಯವರು ಹಿಂದೂ ಸಂಘಟನೆಯ ಕಾರ್ಯಕರ್ತರೆಂದು ತಿಳಿದು ಬಂದಿದ್ದು ಚೂರಿ ಇರಿತಕ್ಕೆ ಒಳಗಾಗಿರುವ ಹಿಂದೂ ಕಾರ್ಯಕರ್ತ ಪ್ರಕಾಶವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಭಾನುವಾರ ಶಾಸಕ ವೀರಣ್ಣ ಚರಂತಿಮಠವರು ಆಸ್ಪತ್ರೆಗೆ ಭೇಟಿ ನೀಡಿ ಪ್ರಕಾಶ ಅವರ ಆರೋಗ್ಯ ವಿಚಾರಿಸಿದರು. ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಮತ್ತು ಹಿಂದೂ ಸಂಘಟನೆಗಳ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಕಾನೂನು ಕ್ರಮದ ಎಚ್ಚರಿಕೆ : ಜಿಲ್ಲೆಯ ಎಲ್ಲ ತಾಲ್ಲೂಕು ಹಾಗೂ ನಗರ ಮತ್ತು ಗ್ರಾಮಗಳಲ್ಲಿ ಯಾರಾದರೂ ಹಿಜಾಬ್ ಮತ್ತು ಕೇಸರಿ ಶಾಲು ವಿಚಾರಕ್ಕೆ ಸಂಬಂಧಿಸಿದಂತೆ ವಾಟ್ಸ್ ಅಪ್, ಪೇಸಬುಕ್, ಇನ್ಸ್ಟ್ರಾಗ್ರಾಮ್ ಮತ್ತು ಸಾಮಾಜಿಕ  ಜಾಲತಾಣಗಳಲ್ಲಿ ಯಾವುದೇ ರೀತಿಯ ಪೋಸ್ಟರ ಮತ್ತು ಇದಕ್ಕೆ ಸಂಬಂಧಪಟ್ಟಂತೆ ಯಾರಾದರೂ ಗುಂಪುಗಾರಿಕೆ, ಗಲಾಟೆ, ದೊಂಬಿ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಂಡು ರೌಡಿ ಶೀಟರ್ ಹಾಗೂ ಕಮ್ಯೂನಲ್ ಗೂಂಡಾ ಶೀಟ್ಗಳನ್ನು ತೆರೆಯಲಾಗುವುದು. ಈ ಬಗ್ಗೆ ಮಾಹಿತಿ ಇದ್ದರೆ ಕಾನೂನು ಕೈಗೆ ತೆಗೆದುಕೊಳ್ಳದೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಎಸ್ಪಿಯವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!