ಗುರುವಾಯೂರಪ್ಪನ ಸನ್ನಿಧಿಯಲ್ಲಿ ಗಟ್ಟಿಮೇಳದ ಸದ್ದು: ಒಂದೇ ದಿನ 354 ಜೋಡಿ ದಾಂಪತ್ಯ ಬದುಕಿಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತದ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಕೇರಳದ ಗುರುವಾಯೂರಿನಲ್ಲಿ ಈ ಬಾರಿ ದಾಖಲೆಯ ಸಂಖ್ಯೆಯ ವಿವಾಹ ನಡೆಯುತ್ತಿದ್ದು, ಬರೋಬ್ಬರಿ ೩೫೪ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ದೇವಸ್ವಂ ಮಾಹಿತಿ ಪ್ರಕಾರ ಈ ಕ್ಷೇತ್ರದಲ್ಲಿ ಇಷ್ಟೊಂದು ಜೋಡಿಗಳು ಹಸೆಮಣೆಯೇರುತ್ತಿರುವುದು ಇದೇ ಮೊದಲು. ಇಲ್ಲಿನ ನಾಲ್ಕು ವಿವಾಹ ಮಂಟಪಗಳಲ್ಲದೆ ಈ ಬಾರಿ ದೇವಾಲಯದ ಮುಂಭಾಗ ಎರಡು ತಾತ್ಕಾಲಿಕ ಮಂಟಪ ಕೂಡಾ ಸ್ಥಾಪಿಸಲಾಗಿದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಮುಂಜಾನೆ 4 ಗಂಟೆಗೆ ವಿವಾಹ ಕಾರ್ಯಗಳು ಆರಂಭವಾಗಿದ್ದು, ಪ್ರತೀ ತಂಡಕ್ಕೆ ಓರ್ವ ಛಾಯಾಗ್ರಾಹಕನ ಸಹಿತ 24 ಮಂದಿಗೆ ಅವಕಾಶ ಕಲ್ಪಿಸಲಾಗಿದೆ.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!