ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರೋಬ್ಬರಿ 23 ಲಕ್ಷಕ್ಕೂ ಅಧಿಕ ಟಿಕೇಟ್ ಮಾರಾಟ ಮಾಡುವ ಮೂಲಕ ಕೇರಳದ ತಿರುವೋಣಂ ಬಂಪರ್ ಲಾಟರಿ ಹೊಸ ದಾಖಲೆ ಬರೆಯಲು ಮುನ್ನುಗ್ಗುತ್ತಿದೆ!
ಈ ಪೈಕಿ ಟಿಕೇಟ್ ಖರೀದಿಯಲ್ಲಿ ಪಾಲಕ್ಕಾಡ್ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಪ್ರಥಮ ಬಹುಮಾನ 25 ಕೋಟಿ ರೂ.ಗಳಾಗಿದ್ದು, ಎರಡನೇ ಬಹುಮಾನ 20 ಮಂದಿಗೆ ತಲಾ 1 ಕೋಟಿ ರೂ., ತೃತೀಯ ಬಹುಮಾನ 50 ಲಕ್ಷ ರೂ.ಗಳಾಗಿದೆ. ಇದಲ್ಲದೆ ಐದು ಲಕ್ಷ, ಎರಡು ಲಕ್ಷ, ನಾಲ್ಕು ಮತ್ತು ಐದು ಬಹುಮಾನಗಳು ಮತ್ತು ಅಂತಿಮ ಬಹುಮಾನ 500ರೂ.ಗಳಾಗಿದೆ. ಈ ನಡುವೆ ಕೇರಳದಲ್ಲಿ ಮಾತ್ರ ರಾಜ್ಯದ ಲಾಟರಿ ಟಿಕೆಟ್ ಮಾರಾಟವಿದ್ದು, ಪೇಪರ್ ಲಾಟರಿ ಮಾತ್ರ ಕಾನೂನುಬದ್ದ ಎಂದು ಜಾಗೃತಿ ಅಭಿಯಾನ ವಿಭಾಗ ನಾಗರಿಕರಿಗೆ ಮುನ್ನೆಚ್ಚರಿಕೆ ನೀಡಿದೆ.
ಕಳೆದ ವರ್ಷ ಓಣಂ ಬಂಪರ್ ಮೊದಲ ಬಹುಮಾನ ಕೋಝಿಕ್ಕೋಡ್‌ನಲ್ಲಿ ಮಾರಾಟವಾದ ಟಿಕೆಟ್‌ಗೆ ಲಭಿಸಿತ್ತು.