ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋನ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-೩ ಮತ್ತೊಂದು ಯಶಸ್ಸು ಸಾಧಿಸಿದೆ, ನೌಕೆಯು ಇಂದು ತನ್ನ ಕಕ್ಷೆ ಕಡಿತ ಕಾರ್ಯವನ್ನೂ ಯಶಸ್ವಿಯಾಗಿ ನಡೆಸಿದ್ದು, ನೌಕೆ ತೆಗೆದ ಮೊದಲ ಚಂದ್ರನ ಚಿತ್ರವನ್ನು ಇಸ್ರೋ ಹಂಚಿಕೊಂಡಿದೆ.
ಈ ಬಗ್ಗೆ ಇಸ್ರೋ ಮಾಹಿತಿ ನೀಡಿದ್ದು, ಬಾಹ್ಯಾಕಾಶ ನೌಕೆಯು ಯೋಜಿತ ಕಕ್ಷೆ ಕಡಿತವನ್ನು ಯಶಸ್ವಿಯಾಗಿ ನಡೆಸಿದೆ. ಇದರಿಂದಾಗಿ ನೌಕೆ ಚಂದ್ರನಿಗೆ ಇನ್ನಷ್ಟು ಸಮೀಪವಾಗಿದೆ. ಕಕ್ಷೆಯನ್ನು ಮತ್ತಷ್ಟು ಕಡಿಮೆ ಮಾಡುವ ಮುಂದಿನ ಕಾರ್ಯಾಚರಣೆ ಆ.9ರಂದು ನಡೆಯಲಿದೆ.
ಚಂದ್ರಯಾನ ನೌಕೆ ಚಂದ್ರನ ಚಿತ್ರಗಳನ್ನು ಸೆರೆಹಿಡಿದಿದ್ದು,ಇಸ್ರೋ ಅಧಿಕೃತವಾಗಿ ಟ್ವಿಟರ್‌ನಲ್ಲಿ ಫೋಟೊಗಳನ್ನು ಹಂಚಿಕೊಂಡಿದೆ.
The Moon, as viewed by #Chandrayaan3 spacecraft during Lunar Orbit Insertion (LOI) on August 5, 2023.#ISRO pic.twitter.com/xQtVyLTu0c
— LVM3-M4/CHANDRAYAAN-3 MISSION (@chandrayaan_3) August 6, 2023