Sunday, October 1, 2023

Latest Posts

ಪದೇ ಪದೆ ಅಮ್ಮನ ಮನೆಗೆ ಯಾಕೆ ಹೋಗ್ತೀಯಾ ಎಂದಿದ್ದಕ್ಕೆ ನವವಿವಾಹಿತೆ ಆತ್ಮಹತ್ಯೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಾವುದೇ ಹೆಣ್ಣಿಗೆ ಮದುವೆಯಾಗಿ ಗಂಡನ ಮನೆಗೆ ಬಂದಾದಿನ ಎಲ್ಲವೂ ಹೊಸತೇ, ಹೊಸ ಮನೆಯಲ್ಲಿ ಬೇರೂರಲು ಪ್ರಯತ್ನಪಡುವ ಅವಳಿಗೆ ತವರು ಮನೆ ಸದಾ ಮೊದಲು.

ಇದೇ ರೀತಿ ತವರು ಮನೆಗೆ ಕಳಿಸಲು ಪತಿ ಒಪ್ಪದ ಕಾರಣ ನವವಿವಾಹಿತೆಯೊಬ್ಬಳು ಆತ್ಮಹತ್ಯೆಗೆ ಮುಂದಾಗಿದ್ದಾಳೆ. ಉತ್ತರ ಪ್ರದೇಶದ ಬಲಿಯಾದಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ನಿಶಾ ಪತಿ ನೌಕಾಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಅವರು ಕರ್ತವ್ಯಕ್ಕೆ ಮರಳುವಾಗ ನಿಶಾರನ್ನು ತನ್ನ ತಂದೆ ತಾಯಿಯ ಜೊತೆಯಲ್ಲಿ ಇರು ಎಂದು ಹೇಳಿದ್ದರು. ಇದಕ್ಕೆ ನಿಶಾ ಒಪ್ಪಿರಲಿಲ್ಲ, ನಾನು ನನ್ನ ತವರು ಮನೆಯಲ್ಲಿ ಇರುತ್ತೇನೆ ಎಂದು ಹೇಳಿದ್ದಳು. ಆದರೆ ಯಾರೂ ಇದನ್ನು ಒಪ್ಪಿರಲಿಲ್ಲ. ಹೀಗಾಗಿ ನಿಶಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಿಶಾ ತಂದೆ ಧ್ರುವ್ ಪೊಲೀಸ್ ಠಾಣೆಯಲ್ಲಿ ನಿಶಾ ಪತಿ ಹಾಗೂ ಅವರ ಪೋಷಕರ ವಿರುದ್ಧ ವರದಕ್ಷಿಣೆ, ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!