ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನ ಮಾನಸರೋವರ ಪುಷ್ಕರಣಿ ವಿದ್ಯಾಶ್ರಮ ಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿ ಚಿರಾಧ್ಯ ಎಸ್.ಜಿ.ಭಟ್ ಸ್ಪ್ಯಾನಿಶ್ ಭಾಷೆ ಪ್ರೌಢಿಮೆಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಿದ್ದಾಳೆ. ಈಕೆ, ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕು ಆನೆಕಲ್ಲು ಮೂಲದ ಸತ್ಯಗಣಪತಿ ಭಟ್-ಅನುಪ್ರಿಯ ದಂಪತಿಯ ಪುತ್ರಿ.
ಈಕೆ 1-100ರ ವರೆಗಿನ ಸಂಖ್ಯೆಗಳನ್ನು ಸ್ಪ್ಯಾನಿಶ್ ಭಾಷೆಯಲ್ಲಿ 1 ನಿಮಿಷ 10 ಸೆಕೆಂಡ್‌ನಲ್ಲಿ ಹೇಳಿ ತನ್ನ 8ನೇ ವಯಸ್ಸಿಗೆ ದಾಖಲೆ ನಿರ್ಮಿಸಿದ್ದಾಳೆ. ಈಕೆ ಟಿ.ವಿ. ಕಾರ್ಟೂನ್ ನೋಡುತ್ತಾ ಎರಡೂವರೆ ವರ್ಷ ಪ್ರಾಯದಲ್ಲಿಯೇ ಸ್ಪ್ಯಾನಿಶ್ ಭಾಷೆಯಲ್ಲಿ 1ರಿಂದ 10 ರ ವರೆಗಿನ ಅಂಕೆಗಳನ್ನು ಕಲಿತು ನಂತರ ತನ್ನ ತಾಯಿಯ ಸಹಕಾರದಿಂದ ಯೂಟ್ಯೂಬ್‌ನಿಂದ ಹೆಚ್ಚಿನ ಸಂಖ್ಯೆಗಳನ್ನು ಕಲಿತು ಅತ್ಯಂತ ವೇಗವಾಗಿ ಹೇಳುವ ಮುಖಾಂತರ ದಾಖಲೆ ನಿರ್ಮಿಸಿದ್ದಾಳೆ. ಲಾಕ್ಡೌನ್ ಸಮಯದಲ್ಲಿ ಸ್ಪ್ಯಾನಿಶ್ ಭಾಷೆಯಲ್ಲಿ ದೇಹದ ಭಾಗಗಳ, ಬಣ್ಣಗಳ, ವಾರಗಳ ತಿಂಗಳುಗಳ, ಸರಳ ಪದಗಳ, ಪ್ರಾಣಿಗಳ ಹೆಸರುಗಳನ್ನು ಅತ್ಯಂತ ವೇಗವಾಗಿ ಕಲಿತುಕೊಂಡು ದಾಖಲೆ ನಿರ್ಮಿಸಿದ್ದಾಳೆ. ಇವಳು ಇತ್ತೀಚೆಗೆ ಕರ್ನಾಟಕ ಆಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಕೀಬೋರ್ಡ್ ನುಡಿಸುವಲ್ಲಿಯೂ ದಾಖಲೆ ನಿರ್ಮಿಸಿದ್ದಾಳೆ. ಈ ದಾಖಲೆಗಾಗಿ ಕಣ್ಣಿಗೆ ಪಟ್ಟಿ ಕಟ್ಟಿ 10 ಹಾಡುಗಳನ್ನು ಕೀಬೋರ್ಡ್ ನೋಡದೇ ನುಡಿಸಿರುತ್ತಾಳೆ. ಈಕೆ ಕೀಬೋರ್ಡ್‌ನ್ನು ಕಳೆದ 4 ತಿಂಗಳುಗಳಿಂದ ಮೈಸೂರಿನ ಜೋಯೆಲ್ ಶಿರಿಯ ಅವರ ಮಾರ್ಗದರ್ಶನದಲ್ಲಿ ಕಲಿಯುತ್ತಿದ್ದಾಳೆ.