Saturday, February 24, 2024

ವೀಕೆಂಡ್‌ ಕರ್ಫ್ಯೂ: ನಿಯಮ ಉಲ್ಲಂಘನೆ, 523 ವಾಹನ ಸೀಜ್ ಮಾಡಿದ ಪೋಲೀಸರು

ದಿಗಂತ ವರದಿ, ಬಳ್ಳಾರಿ:

ವೀಕೆಂಡ್ ‌ಕರ್ಫ್ಯೂ ಹಿನ್ನೆಲೆ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ, ಕಳೆದ ಎರಡು ದಿನಗಳಲ್ಲಿ ಪೊಲೀಸರು ಬರೋಬ್ಬರಿ 523 ವಾಹನಗಳನ್ನು ಹಾಗೂ 2,32,100 ರೂ.ದಂಡ ವಸೂಲಿ ಮಾಡಿದ್ದಾರೆ. ಇದರ ಜೊತೆಗೆ ಮಾಸ್ಕ್ ಧರಿಸದಿರುವವರ ವಿರುದ್ಧ 751 ಪ್ರಕರಣ ದಾಖಲಿಸಿ, 90,100 ರೂ. ದಂಡ ವಿಧಿಸಿದ್ದಾರೆ. ವೀಕೆಂಡ್ ಕರ್ಫ್ಯೂ ಮೊದಲ ದಿನ ಶನಿವಾರ ಅನಗತ್ಯ ಸಂಚಾರದಲ್ಲಿ ನಿರತರಾಗಿದ್ದವರ 177 ಬೈಕ್ ಗಳನ್ನು ವಶಕ್ಕೆ ಪಡೆದಿದ್ದು, 78,600 ರೂ.ದಂಡ ವಿಧಿಸಿದ್ದಾರೆ. ಮಾಸ್ಕ್ ಧರಿಸದೇ ಇರುವವ‌ರ ವಿರುದ್ಧ 363 ಪ್ರಕರಣಗಳು ದಾಖಲಾಗಿದ್ದು, 43,500 ರೂ. ದಂಡ ವಸೂಲಿ ಮಾಡಿದ್ದಾರೆ. ‌
ಎರಡನೇ ದಿನ ಭಾನುವಾರ 352 ಬೈಕ್ ಗಳನ್ನು ಸೀಜ್ ಮಾಡಿದ್ದು, 1,55,300 ರೂ. ದಂಡ ‌ವಸೂಲಿ ಮಾಡಿದ್ದಾರೆ. ಮಾಸ್ಕ್ ಧರಿಸದೇ ಇರುವವರ‌ ವಿರುದ್ಧ 398 ಪ್ರಕರಣಗಳು ದಾಖಲಾಗಿದ್ದು, 50,600 ರೂ.ದಂಡ‌ ವಸೂಲಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!