ಭಾರತ- ಶ್ರೀಲಂಕಾ ಕೊನೆಯ ಪಂದ್ಯದಲ್ಲಿ ಸ್ಟೇಡಿಯಂ ಇತ್ತು ಖಾಲಿ ಖಾಲಿ: ಕಾರಣ ಏನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಭಾರತ (India) ಹಾಗೂ ಶ್ರೀಲಂಕಾ (Sri Lanka) ನಡುವಿನ ಕೊನೆಯ ಏಕದಿನ ಪಂದ್ಯ ಕೇರಳದ ತಿರುವನಂತಪುರಂ (Thiruvananthapura) ಸ್ಟೇಡಿಯಂನಲ್ಲಿ (Stadium) ನಡೆದಿತ್ತು. ಆದ್ರೆ ಪಂದ್ಯಕ್ಕೆ ಪ್ರೇಕ್ಷಕರಿಲ್ಲದೇ ಸ್ಟೇಡಿಯಂ ಖಾಲಿ ಹೊಡೆದಿತ್ತು.

ಇದಕ್ಕೆ ಕಾರಣ ಏನು ಎಂದು ಹುಡುಕಿದ್ದಾಗ ಟಿಕೆಟ್ ತೆರಿಗೆ ದರ ಏರಿಕೆ ಮತ್ತು ಕೇರಳದ ಕ್ರೀಡಾ ಸಚಿವ ವಿ.ಅಬ್ದುರಹಿಮಾನ್ (V Abdurahiman) ವಿವಾದಾತ್ಮಕ ಹೇಳಿಕೆ ಕಾರಣ.

ಟಿಕೆಟ್ ದರ ಇಳಿಕೆ ಬಗ್ಗೆ ಕ್ರೀಡಾ ಪ್ರೇಮಿಗಳು ಆಗ್ರಹಿಸಿದ್ದರು. ಇದಕ್ಕೆ ವಿ.ಅಬ್ದುರಹಿಮಾನ್, ತೆರಿಗೆ ಇಳಿಸುವ ಅಗತ್ಯ ಏನಿದೆ? ದೇಶದಲ್ಲಿ ಬೆಲೆ ಏರಿಕೆ ಸರ್ವೇಸಾಮಾನ್ಯವಾಗಿದೆ. ತೆರಿಗೆಯನ್ನು ಕಡಿಮೆ ಮಾಡಬೇಕು ಎಂಬ ಬೇಡಿಕೆಯಿದೆ ಆದರೆ ಟಿಕೆಟ್ ಹಣ ನೀಡಲಾಗದವರು ಪಂದ್ಯ ನೋಡಬೇಕಾಗಿಲ್ಲ. ಹಸಿವಿನಿಂದ ಬಳಲುತ್ತಿರುವವರು ಪಂದ್ಯ ವೀಕ್ಷಿಸಲು ಬರಬೇಕಾಗಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಆ ಬಳಿಕ ಪಂದ್ಯವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳು ಕಂಡು ಬಂತು. ಹೀಗಾಗಿ ಸ್ಟೇಡಿಯಂ ಕೂಡ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರಿಲ್ಲದೆ ಪಂದ್ಯ ನಡೆಯಿತು.

ವಿ.ಅಬ್ದುರಹಿಮಾನ್ ವಿವಾದಾತ್ಮಕ ಹೇಳಿಕೆ ವಿರುದ್ಧ ಆಕ್ರೋಶ ಕೇಳಿ ಬರುತ್ತಿದೆ. ಕ್ರೀಡಾ ಸಚಿವರ ವಿರುದ್ಧ ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಕಿಡಿಕಾರಿದ್ದಾರೆ. ಅಬ್ದುರಹಿಮಾನ್ ಏನೇ ಹೇಳಿದರೂ ಜನರು ಪಂದ್ಯಕ್ಕೆ ಬರುವುದನ್ನು ತಪ್ಪಿಸಬಾರದು. ಜನರು ಬರದಿರುವುದರಿಂದ ಸಚಿವರಿಗೆ ಏನು ನಷ್ಟವಿಲ್ಲ ಆದರೆ ಇದು ಕ್ರಿಕೆಟ್ ಮತ್ತು ಕ್ರೀಡೆಯನ್ನು ಪ್ರೀತಿಸುವವರಿಗೆ ನಷ್ಟ. ಪಂದ್ಯವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಪ್ರಚಾರಗಳನ್ನು ನಾನು ನೋಡಿದ್ದೇನೆ. ಅವರ ಪ್ರಚಾರವು ಪರಿಣಾಮಕಾರಿಯಾಗಿ ಕಂಡಿತ್ತು. ಆದರೆ ಈ ರೀತಿ ಮಾಡಬಾರದಿತ್ತು. ಮೂರನೇ ಏಕದಿನ ಪಂದ್ಯವನ್ನು ವೀಕ್ಷಿಸಲು ನಾನು ಮತ್ತು ಅಲ್ಲಿಗೆ ಬಂದವರು ಅದೃಷ್ಟಶಾಲಿಯಾಗಿದ್ದರು. ಉತ್ತಮವಾದ ಪಂದ್ಯವಾಗಿತ್ತು. ಸಚಿವರು ಆ ರೀತಿ ಹೇಳಿಕೆಯನ್ನು ಕೊಡಬಾರದಿತ್ತು ಎಂದಿದ್ದಾರೆ.

ಆದರೆ ಸಿಪಿಐ(ಎಂ) ಕ್ರೀಡಾ ಸಚಿವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ. ಅವರ ಹೇಳಿಕೆಯಲ್ಲಿ ಏನು ತಪ್ಪಿಲ್ಲ ಎಂದು ವಾದಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!