ಆರ್ಥಿಕ ಹಿಂಜರಿಕೆಯ ಹೊಡೆತದಲ್ಲಿ ದೈತ್ಯ ಕಂಪನಿಗಳು: ಮೆಟಾ, ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಘೋಷಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ದೈತ್ಯ ಕಂಪನಿಗಳು ಇಂದು ಆರ್ಥಿಕ ಹಿಂಜರಿತಯ ಹೊಡೆತಕ್ಕೆ ಸಿಲುಕಿ ಓಡಾಡುತ್ತಿದ್ದು, ಇದರ ಭಾಗವಾಗಿ ಮೆಟಾ ( ) ಮತ್ತು ಮೈಕ್ರೋಸಾಫ್ಟ್ (Microsoft) ಸಿಯಾಟಲ್, ಯುಎಸ್‌ನ ವಾಷಿಂಗ್ಟನ್‌ನಲ್ಲಿರುವ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿದೆ.

ಈಗಾಗಲೇ ಅನೇಕ ಕಂಪೆನಿಗಳು ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ. ಈ ಪೈಕಿ ಮೆಟಾ ಮತ್ತು ಮೈಕ್ರೋಸಾಫ್ಟ್ ಕೂಡ ಒಂದು, ಇದೀಗ ತನ್ನ ಕಂಪನಿಗೆ ಆಗುವ ವೆಚ್ಚವನ್ನು ಕಡಿಮೆ ಮಾಡಲು ತನ್ನ ಉಳಿದ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಘೋಷಣೆ ಮಾಡಿದೆ.

ಈ ಬಗ್ಗೆ ಈಗಾಗಲೇ ಮೆಟಾ, ಡೌನ್‌ಟೌನ್ ಸಿಯಾಟಲ್ ಮತ್ತು ಬೆಲ್ಲೆವ್ಯುನಲ್ಲಿರುವ ಕಚೇರಿಗಳ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶವನ್ನು ನೀಡಿದೆ.

ಬೆಲ್ಲೆವ್ಯೂನಲ್ಲಿರುವ 26-ಅಂತಸ್ತಿನ ಸಿಟಿ ಸೆಂಟರ್ ಪ್ಲಾಜಾದಲ್ಲಿ ಮೈಕ್ರೋಸಾಫ್ಟ್ ತನ್ನ ಗುತ್ತಿಗೆಯನ್ನು ನವೀಕರಿಸುವುದಿಲ್ಲ ಎಂದು ವರದಿ ಹೇಳಿದೆ. ಹಾಗಾಗಿ ಎಲ್ಲರಿಗೂ ವರ್ಕ್ ಫ್ರಮ್ ಹೋ ನೀಡುವ ಯೋಚನೆಯನ್ನು ಮಾಡಿದೆ.

ಸಿಯಾಟಲ್ ಕಚೇರಿಯನ್ನು ಬಿಟ್ಟುಕೊಡಲು ಮೆಟಾದ ಕಂಪನಿಯ ವಕ್ತಾರ ಟ್ರೇಸಿ ಕ್ಲೇಟನ್ ಈ ಪ್ರಕಟನೆಯನ್ನು ಹೊರಡಿಸಿದ್ದಾರೆ. ದೂರಸ್ಥ ಅಥವಾ ವಿತರಿಸಿದ ಕೆಲಸದ ಕಡೆಗೆ ಚಲಿಸಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಪ್ರಸ್ತುತ ಆರ್ಥಿಕ ವಾತಾವರಣವನ್ನು ನೋಡಿ ಕಂಪನಿಯು ಆರ್ಥಿಕವಾಗಿ ವಿವೇಕಯುತ ಖರ್ಚು ಮಾಡಲು ನಿರ್ಧಾರಿಸುವುದರಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ವಕ್ತಾರರು ಒಪ್ಪಿಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!