10ರೂ. ಪಡೆದು ಬಾಲಕನಿಗೆ ಬರ್ಗರ್ ನೀಡಿದ ಸಿಬ್ಬಂದಿ: ಸನ್ಮಾನಿಸಿದ ಸಂಸ್ಥೆಯ ಪ್ರತಿನಿಧಿಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬರ್ಗರ್ ಕಿಂಗ್ ಔಟ್ ಲೆಟ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಬಾಲಕನಿಂದ 10 ರೂಪಾಯಿ ತೆಗೆದುಕೊಂಡು ಬರ್ಗರ್ ನೀಡಿದ್ದಾನೆ. ಯುವಕನ ಹೃದಯ ವೈಶಾಲ್ಯತೆಗೆ ಮೆಚ್ಚಿದ ಬರ್ಗರ್ ಕಿಂಗ್ ಇಂಡಿಯಾ ಕಂಪನಿಯ ಪ್ರತಿನಿಧಿಗಳು ಯುವಕನಿಗೆ ಸನ್ಮಾಸಿದ್ದಾರೆ. ನೋಯ್ಡಾದ ಬೊಟಾನಿಕಲ್ ಗಾರ್ಡನ್ ಮೆಟ್ರೋ ನಿಲ್ದಾಣದ ಬಳಿಯಿರುವ ಬರ್ಗರ್ ಕಿಂಗ್ ಔಟ್ಲೆಟ್ಗೆ ಹೋದ ಬಾಲಕನೊಬ್ಬ 10ರೂ ಕೊಟ್ಟು ಬರ್ಗರ್‌ ಕೊಡುವಂತೆ ಕೇಳಿದ್ದಾನೆ. 90 ಬೆಲೆಯ ಬರ್ಗರ್ ಕೊಟ್ಟು ಬಾಲಕನ ಮುಖದಲ್ಲಿ ಖುಷಿಯನ್ನು ಕಂಡಿದ್ದಾನೆ ಧೀರಜ್‌ ಕುಮಾರ್.‌ ಉಳಿದ 80 ರೂಪಾಯಿಯನ್ನು ತನ್ನ ಜೇಬಿನಿಂದ ನೀಡಿದ್ದಾನೆ.

ಈ ಘಟನೆಯನ್ನು ಸೆರೆಹಿಡಿದು ಲೈಫ್ ಮೆಂಬರ್ ಎಂಬ ಟ್ವಿಟರ್ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಧೀರಜ್ ಕುಮಾರ್ ಮಗುವಿಗೆ ತಾವು ಮಾಡಿದ ಸಹಾಯದ ಬಗ್ಗೆ ಬರೆದಿದ್ದಾರೆ. ಫಾಸ್ಟ್ ಫುಡ್ ಕಂಪನಿಯು ಧೀರಜ್ ಕುಮಾರ್ ಮಗುವಿನ ಬಗ್ಗೆ ಕಾಳಜಿ ತೋರಿದ ಉದ್ಯೋಗಿ ಎಂದು ಗುರುತಿಸಿ, ಶ್ಲಾಘಿಸಿದ್ದಾರೆ. ಇದನ್ನು ಬರ್ಗರ್ ಕಿಂಗ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!