ತೆಲಂಗಾಣ ಪ್ರವೇಶಿಸಿದ ರಾಹುಲ್ ಭಾರತ್ ಜೋಡೋ ಯಾತ್ರೆ: ಅದ್ಧೂರಿ ಸ್ವಾಗತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ತೆಲಂಗಾಣ ಪ್ರವೇಶಿಸಿದೆ. ಕರ್ನಾಟಕದ ರಾಯಚೂರಿನಲ್ಲಿ ರಾಹುಲ್ ಪಾದಯಾತ್ರೆ ಮುಕ್ತಾಯಗೊಂಡು, ಅಧಿಕೃತವಾಗಿ ತೆಲಂಗಾಣಕ್ಕೆ ಕಾಲಿಟ್ಟಿದೆ. ನಾರಾಯಣಪೇಟೆ ಜಿಲ್ಲೆಯ ಮಕ್ತಲ್ ಕ್ಷೇತ್ರದ ಕೃಷ್ಣಾ ಮಂಡಲದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯರು ರಾಹುಲ್ ಗಾಂಧಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಈ ಪಾದಯಾತ್ರೆಯಲ್ಲಿ ಟಿಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ, ಸಿಎಲ್‌ಪಿ ನಾಯಕ ಭಟ್ಟಿ ವಿಕ್ರಮಾರ್ಕ, ಸಂಸದ ಉತ್ತಮ್ ಕುಮಾರ್ ರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.

ಇಂದು ಗುಡೇಬಳ್ಳೂರಿನಲ್ಲಿ ರಾಹುಲ್ ಯಾತ್ರೆಗೆ ಬ್ರೇಕ್ ಬೀಳಲಿದೆ. ಆ ಬಳಿಕ ಇದೇ ತಿಂಗಳ 27ರಂದು ಬೆಳಗ್ಗೆ ಗುಡೇಬಳ್ಳೂರಿನಿಂದ ಮತ್ತೆ ರಾಹುಲ್ ಯಾತ್ರೆ ಆರಂಭವಾಗಲಿದೆ. ಒಟ್ಟು 12 ದಿನಗಳ ಕಾಲ ತೆಲಂಗಾಣದಲ್ಲಿ ರಾಹುಲ್ ಗಾಂಧಿ ಯಾತ್ರೆ ನಡೆಯಲಿದೆ. ತೆಲಂಗಾಣದ 19 ವಿಧಾನಸಭಾ ಮತ್ತು 7 ಸಂಸದೀಯ ಕ್ಷೇತ್ರಗಳಲ್ಲಿ ರಾಹುಲ್ ಒಟ್ಟು 375 ಕಿಲೋಮೀಟರ್ ಪಾದಯಾತ್ರೆ ನಡೆಸಲಿದ್ದಾರೆ.

ಇದೇ ವೇಳೆ ಇದೇ ತಿಂಗಳ 26ರಂದು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಖರ್ಗೆ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ರಾಹುಲ್ ಗಾಂಧಿ ಅವರು ಈಗಾಗಲೇ ತಮಿಳುನಾಡು, ಎಪಿ ಮತ್ತು ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಪೂರ್ಣಗೊಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!