ಉತ್ತರ ಪತ್ರಿಕೆಯಲ್ಲಿ ಪಾಸ್ ಮಾಡುವಂತೆ ಬರೆದು ಮೌಲ್ಯಮಾಪಕರಲ್ಲಿ ವಿದ್ಯಾರ್ಥಿನಿ ಮನವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪರೀಕ್ಷೆ ಬರೆಯುವಾಗ ವಿದ್ಯಾರ್ಥಿಗಳು ಭಯಪಡುತ್ತಾರೋ ಗೊತ್ತಿಲ್ಲ, ಆದರೆ ಪರೀಕ್ಷೆಯ ಫಲಿತಾಂಶ ಬಂದ ದಿನ ಭಯ ಅಂತೂ ಇದ್ದೆ ಇರುತ್ತದೆ. ಕೆಲವು ವಿದ್ಯಾರ್ಥಿಗಳು ಪರೀಕ್ಷೆಯನ್ನು ಚೆನ್ನಾಗಿ ಬರೆದರೂ ಉತ್ತರ ಪತ್ರಿಕೆಯ ಕೊನೆಯಲ್ಲಿ “ದಯವಿಟ್ಟು ನನ್ನನ್ನು ಪಾಸ್ ಮಾಡಿ” ಎಂದು ಬರೆಯುತ್ತಾರೆ.

ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಿದಾಗ ಪ್ರತಿ ವರ್ಷವೂ ಇಂತಹ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತವೆ. ಈ ಹಿಂದೆ, ಉತ್ತರ ಪತ್ರಿಕೆಗಳ ಫೋಟೋಗಳು ಮತ್ತು ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ ವಿದ್ಯಾರ್ಥಿಗಳು ಉತ್ತರ ಪತ್ರಿಕೆಗೆ ನೂರಾರು ರೂಪಾಯಿಗಳ ನೋಟುಗಳನ್ನು ಅಂಟಿಸಿ ಪಾಸ್ ಮಾಡುವಂತೆ ಕೇಳುತ್ತಿದ್ದರು.

ಈಗ ಈ ಸುದ್ದಿ ಮತ್ತೊಮ್ಮೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಯೊಬ್ಬಳು ಉತ್ತರ ಪತ್ರಿಕೆಯಲ್ಲಿ, “ಸರ್, ದಯವಿಟ್ಟು ನನ್ನನ್ನು ಪಾಸು ಮಾಡಲು ಅವಕಾಶ ಮಾಡಿಕೊಡಿ, ಇಲ್ಲದಿದ್ದರೆ ನನಗೆ ಮನೆಯಲ್ಲಿ ಮದುವೆ ಮಾಡುತ್ತಾರೆ” ಎಂದು ಬರೆದು ಮೌಲ್ಯಮಾಪಕರಲ್ಲಿ ಮನವಿ ಸಲ್ಲಿಸಿದ್ದಾಳೆ. ಈ ಉತ್ತರ ಪತ್ರಿಕೆಯ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!