SHOCKING | ಮತ್ತೆ ಬಂತು ‘ಬ್ಲೂವೇಲ್‌ ದೆವ್ವ’ ಕೆಟ್ಟಾಟಕ್ಕೆ ವಿದ್ಯಾರ್ಥಿ ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆತ್ಮಹತ್ಯೆಗೆ ಪ್ರಚೋದನೆ ನೀಡುವ ಬ್ಲೂವೇಲ್‌ ( Blue Whale) ಆಟಕ್ಕೆ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿ ಬಲಿಯಾಗಿದ್ದಾನೆ.

ಮ್ಯಾಸಚುಸೆಟ್ಸ್‌ ಯುನಿವರ್ಸಿಟಿ (Massachusetts University)  ವಿದ್ಯಾರ್ಥಿಯಾದ 20 ವರ್ಷದ ಯುವಕ ಬ್ಲೂ ವೇಲ್‌ ಆಟಕ್ಕೆ ಬಲಿಯಾಗಿದ್ದಾನೆ. ಆತನ ಕುಟುಂಬದವರ ಮನವಿ ಮೇರೆಗೆ ಆತನ ವೈಯಕ್ತಿಕ ಮಾಹಿತಿಯ ಗೌಪ್ಯತೆ ಕಾಪಾಡಿಕೊಳ್ಳಲಾಗಿದೆ.

ಒಂದು ತಿಂಗಳ ಹಿಂದೆಯೇ ಯುವಕ ಮೃತಪಟ್ಟಿದ್ದು, ಆತನ ಸಾವನ್ನು ಕೊಲೆ ಎಂದು ಹೇಳಲಾಗಿದೆ. ದರೋಡೆಕೋರರು ಕೊಲೆ ಮಾಡಿ ಕಾಡಿನಲ್ಲಿ ಮೃತದೇಹವನ್ನು ಎಸೆದಿದ್ದಾರೆ ಎಂದು ಹೇಳಲಾಗಿತ್ತು.

ಆದರೆ ಯುವಕ ಬ್ಲೂ ವೇಲ್‌ ಆಟ ಆಡುವ ವೇಳೆ ಎರಡು ನಿಮಿಷಗಳವರೆಗೆ ಉಸಿರನ್ನು ಬಿಗಿಹಿಡಿದುಕೊಂಡಿದ್ದ ಎಂದು ಹೇಳಲಾಗಿದೆ. ಬ್ಲೂ ವೇಲ್‌ ಆಟ ಡೇಂಜರಸ್‌ ಆಗಿದೆ. ಐವತ್ತು ಲೆವೆಲ್‌ಗಳ ಡೇರ್‌ ನಂತರ ಅತಿಯಾದ ಸೂಸೈಡಲ್‌ ಆಟಗಳು ಇದರಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!