September 11, 2026
Friday, September 11, 2026
spot_img

‘ಧುರಂಧರ್’ ರೆಕಾರ್ಡ್ ಮುರಿದು ಇತಿಹಾಸ ಬರೆದ ಸೂಪರ್ ಬ್ಲಾಕ್‌ಬಸ್ಟರ್ ‘ಹನುಮಾನ್ ಅಂಶ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾ ಜಗತ್ತಿನಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಅನ್ನೋದಕ್ಕೆ ‘ಹನುಮಾನ್ ಅಂಶ್’ ಚಿತ್ರವೇ ಸಾಕ್ಷಿ. ಹಳೆಯ ಕಲೆಕ್ಷನ್ ರೆಕಾರ್ಡ್‌ಗಳನ್ನೆಲ್ಲಾ ಧೂಳಿಪಟ ಮಾಡುತ್ತಾ, 5ನೇ ವಾರದಲ್ಲೂ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. 5ನೇ ಗುರುವಾರ ಒಂದೇ ದಿನ ಬರೋಬ್ಬರಿ ₹9.25 ಕೋಟಿ ಬಾಚಿದೆ.

ಐದನೇ ವಾರದಲ್ಲೇ ₹86.50 ಕೋಟಿ ನೆಟ್ ಕಲೆಕ್ಷನ್ ಮಾಡಿರುವುದು ಈ ಸಿನಿಮಾ ಸೃಷ್ಟಿಸಿದ ನಿಜವಾದ ಇತಿಹಾಸ. ಹೋದ ವಾರಕ್ಕಿಂತ ಈ ವಾರ ಶೇ. 48ರಷ್ಟು ಬಿಸಿನೆಸ್ ಜಂಪ್ ಆಗಿದೆ ಅಂದರೆ ಸುಮ್ಮನೆ ಅಲ್ಲ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇಂತಹ ಪವಾಡ ಯಾರೂ ನೋಡಿರಲಿಲ್ಲ.

ಇಲ್ಲಿಯವರೆಗೆ ಭಾರತದಲ್ಲೇ ಬರೋಬ್ಬರಿ ₹156.60 ಕೋಟಿ ನೆಟ್ ಕಲೆಕ್ಷನ್ ಜೇಬಿಗಿಳಿಸಿಕೊಂಡಿದೆ.

ಇತ್ತೀಚೆಗೆ ಬಂದ ‘ಧುರಂಧರ್’ ಸಿನಿಮಾ 5ನೇ ವಾರದ ನಂತರ ₹43 ಕೋಟಿ ಗಳಿಸಿತ್ತು. ಆದರೆ ‘ಹನುಮಾನ್ ಅಂಶ’ ಅದಕ್ಕಿಂತ 2.5 ಪಟ್ಟು ವೇಗದಲ್ಲಿ ಓಡುತ್ತಿದೆ! ಇದೇ ಸ್ಪೀಡ್ ಮುಂದುವರಿದರೆ ಸಿನಿಮಾ ₹263 ಕೋಟಿ ಮುಟ್ಟುವುದು ಪಕ್ಕಾ. ಒಂದು ವೇಳೆ ಲೀಡ್ ಹೀಗೆಯೇ ಹೆಚ್ಚಾದರೆ, ಸಿನಿಮಾ ಆರಾಮಾಗಿ ₹300 ಕೋಟಿ ಕ್ಲಬ್ ಸೇರಿದರೂ ಆಶ್ಚರ್ಯವಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !