Monday, January 30, 2023

Latest Posts

ಚೀನಾಗೆ ಶಾಕ್ ಕೊಟ್ಟ ತಾಲಿಬಾನ್ ಸರಕಾರ: ಬೆಲೆ ಬಾಳುವ ಕಲ್ಲುಗಳ ಕಳ್ಳಸಾಗಣೆ ಮಾಡುತ್ತಿದ್ದ ಪ್ರಜೆಗಳ ಬಂಧನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದಲ್ಲ ಒಂದು ರೀತಿಯಲ್ಲಿ ಕಿತಾಪತಿ ಮಾಡುತ್ತಿರುವ ಚೀನಾಗ ಅಫ್ಘಾನಿಸ್ತಾನ (Afghanistan) ಬಿಸಿ ಮುಟ್ಟಿಸಿದ್ದು, ಕಳ್ಳಸಾಗಣೆಯಲ್ಲಿ (Smuggling Precious Stones) ತೊಡಗಿಸಿಕೊಂಡ ಆರೋಪದ ಮೇಲೆ ಇಬ್ಬರು ಚೀನಿ ಪ್ರಜೆಗಳನ್ನು ಬಂಧಿಸಿದೆ.

1,000 ಮೆಟ್ರಿಕ್ ಟನ್‌ ಲಿಥಿಯಂ-ಒಳಗೊಂಡಿರುವ ಬಂಡೆಗಳನ್ನು ಕಳ್ಳ ಸಾಗಾಣೆ ಮಾಡಿದ ಆರೋಪದಲ್ಲಿ ಇಬ್ಬರು ಚೀನಿ ಪ್ರಜೆಗಳು ಸೇರಿದಂತೆ ಐವರನ್ನು ಪೂರ್ವ ಅಫ್ಘಾನಿಸ್ತಾನದ ಜಲಾಲಾಬಾದ್‌ನ ಪಟ್ಟಣದಲ್ಲಿ ಬಂಧಿಸಲಾಗಿದೆ.

ಚೀನಾ ಪ್ರಜೆಗಳು ಅಫ್ಘಾನ್‌ ವ್ಯಕ್ತಿಗಳ ಜೊತೆ ಸೇರಿ ಪಾಕಿಸ್ತಾನದ ಮೂಲಕ ಬೆಲೆಬಾಳುವ ಕಲ್ಲುಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದರು .
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಮಧ್ಯೆ ಡ್ಯುರಾಂಡ್ ಗಡಿ ರೇಖೆಯ ಉದ್ದಕ್ಕೂ ಇರುವ ಅಫ್ಘಾನ್ ಪ್ರಾಂತ್ಯಗಳಾದ ನುರಿಸ್ತಾನ್ ಮತ್ತು ಕುನಾರ್‌ನಿಂದ ಅಕ್ರಮವಾಗಿ ಈ ಬಡೆಯನ್ನು ಹೊರತೆಗೆಯಲಾಗಿದೆ.ಬಂಡೆಗಳಲ್ಲಿ 30 ಪ್ರತಿಶತದಷ್ಟು ಲಿಥಿಯಯಂ ಇದೆ ತಾಲಿಬಾನ್ ಗುಪ್ತಚರ ಅಧಿಕಾರಿಗಳು ಅಫ್ಘಾನ್‌ ದೂರದರ್ಶನ ಚಾನೆಲ್‌ಗಳಿಗೆ ತಿಳಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!