ಮನೆ ಮುಂದೆ ನಿಲ್ಲಿಸಿದ ಬೈಕ್‌ ಕಳ್ಳತನ, ಖತರ್ನಾಕ್ ಕಳ್ಳ ಪರಾರಿ

ಹೊಸದಿಗಂತ ಪಾಂಡವಪುರ:

ಮನೆಯ ಬಳಿ ನಿಲ್ಲಿಸಿದ ಬೈಕ್‌ನ್ನು ಕಳ್ಳನೋರ್ವ ಕದ್ದು ಬೈಕ್ ಸಮೇತ ಪರಾರಿಯಾಗಿರುವ ಘಟನೆ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.

ಚಿನಕುರಳಿ ಗ್ರಾಮದ ಸಿ.ಎ.ಲೋಕೇಶ್ ಎಂಬುವರಿಗೆ ಸೇರಿದ ಹೋಂಡ ಆಕ್ಸಿಸ್ ಬೈಕ್‌ನ್ನೇ ಕಳ್ಳ ಕದ್ದು ಪರಾರಿಯಾಗಿರುವುದು.

ಚಿನಕುರಳಿಯಲ್ಲಿ ಮಂಗಳವಾರ ಸಂಜೆ ಸ್ನೇಹಿತ ಮನೆಯ ಬಳಿ ಬೈಕ್‌ನಿಲ್ಲಿಸಿದ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಕಳ್ಳನೋರ್ವ ಬೈಕ್ ಕದ್ದು ಪರಾರಿಯಾಗಿದ್ದಾನೆ. ಬೈಕ್ ಕದ್ದು ಹೋಗುತ್ತಿರುವುದನ್ನು ಗಮನಿಸಿ ಹಿಂಬಾಲಿಸಿದರು ಸಹ ಕಳ್ಳ ಕೈಗೆ ಸಿಗದೆ ಬೈಕ್ ಸಮೇತ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಬೈಕ್ ಮಾಲೀಕ ಸಿ.ಎ.ಲೋಕೇಶ್ ನೀಡಿದ ದೂರಿನ ಮೇರೆಗೆ ಪಾಂಡವಪುರ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!