ಹೊಸದಿಗಂತ ಡಿಜಿಟಲ್ ಡೆಸ್ಕ್:
60 ವರ್ಷದ ವೃದ್ಧರೊಬ್ಬರು ವಯಸ್ಸಾದರೂ ಕಷ್ಟಪಟ್ಟು ಟ್ಯಾಕ್ಸಿ ಓಡಿಸಿಕೊಂಡು ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅಂತಹ ವ್ಯಕ್ತಿಯ ಮೇಲೆ ಕೆಲ ಯುವಕ-ಯುವತಿಯರು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ನಡೆದಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೃದ್ಧನೊಂದಿಗೆ ಜಗಳವಾಡಿದ ಮೂವರು ಯುವತಿಯರು, ಇಬ್ಬರು ಯುವಕರು ಸೇರಿ ಎಲ್ಲರೂ ನೋಡುತ್ತಿರುವಾಗಲೇ ಏಕಕಾಲಕ್ಕೆ ಹಲ್ಲೆ ನಡೆಸಿದ್ದಾರೆ. ವೃದ್ಧನನ್ನು ಶೂ ಕಾಲುಗಳಿಂದ ಒದ್ದು, ಹಿಂಸಿಸಿದರು.
ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಕರುಣೆಯಿಲ್ಲದೆ ವೃದ್ಧನನ್ನು ಆರೀತಿ ನಡೆಸಿಕೊಂಡದ್ದು, ಸ್ವಾಗತಾರ್ಹವಲ್ಲ ಎಂದು ಕಾಮೆಂಟ್‌ಗಳು ಬರುತ್ತಿವೆ.