ಎಟಿಎಂನಲ್ಲಿ ಹಣ ಎಗರಿಸೋಕೆ ಪ್ಲಾನ್‌ ಹಾಕಿದ್ದ ಕಳ್ಳರು, ಲಾಸ್ಟ್‌ ಮಿನಿಟ್‌ನಲ್ಲಿ ಏನಾಯ್ತು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಹಾಡಹಗಲೇ ಬೀದರ್ ಮತ್ತು ಮಂಗಳೂರಲ್ಲಿ ಬ್ಯಾಂಕ್ ದರೋಡೆ ಪ್ರಕರಣಗಳ ಬೆನ್ನಲ್ಲೇ ಶಿವಮೊಗ್ಗದಲ್ಲೂ ಎಟಿಎಂ ಕಳ್ಳತನಕ್ಕೆ ಖದೀಮರು ವಿಫಲ ಯತ್ನ ನಡೆಸಿರುವ ಘಟನೆ ಕಳೆದ ತಡರಾತ್ರಿ ನಡೆದಿದೆ.

ನಗರದ ನೆಹರೂ ರಸ್ತೆಯಲ್ಲಿನ ಕೆನರಾ ಬ್ಯಾಂಕ್ ಎಟಿಎಂ ಕಳ್ಳತನ ಮಾಡಲು ಖದೀಮರು ಯತ್ನಿಸಿದ್ದಾರೆ. ಅಷ್ಟರಲ್ಲಿ ಎಟಿಎಂ ಅಲರಾಂ ಶಬ್ದ ಮಾಡಿದೆ. ಆಗ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ. ಎಟಿಎಂನಿಂದ ಸೈರನ್ ಬರುತ್ತಿದ್ದಂತೆ ಸ್ಥಳಕ್ಕೆ 112 ಪೊಲೀಸರು ಸೇರಿದಂತೆ ಕೋಟೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ನೆಹರೂ ರಸ್ತೆಯ ಕಲ್ಯಾಣ್ ಜ್ಯೂವೆಲ್ಸ್ ಪಕ್ಕದಲ್ಲಿ ರಸ್ತೆ ಕಡೆ ಮುಖ ಮಾಡಿರುವ ಎಟಿಎಂ ಮುಂದೆ ವಿದ್ಯುತ್ ಬೋರ್ಡ್ ಇದೆ. ಇದರಿಂದ ಎಟಿಎಂ ಒಳಗೆ ಯಾರಿದ್ದಾರೆ ಎಂಬುದು ತಿಳಿದು ಬರುವುದಿಲ್ಲ. ಇದನ್ನೆ ಬಳಸಿಕೊಂಡ ಕಳ್ಳರು, ಎಟಿಎಂ ಕಳ್ಳತನಕ್ಕೆ ಯತ್ನಿಸಿದ್ದಾರೆ. ಎಟಿಎಂ ಮಷಿನ್ ಓಪನ್ ಮಾಡಿ ಹಣ ತೆಗೆದು ಹೋಗುವ ಯತ್ನದಲ್ಲಿದ್ದಾಗ ಸೈರನ್ ಕೂಗಿದ್ದರಿಂದ ಕಳ್ಳರು ಓಡಿ ಹೋಗಿದ್ದಾರೆ. ಇದರಿಂದ ಎಟಿಎಂನಲ್ಲಿ ಯಾವುದೇ ಹಣ ಕಳ್ಳತನ ಆಗಿಲ್ಲ.

ಎಟಿಎಂನಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಎಟಿಎಂ ಕಳ್ಳತನ ಯತ್ನದ ಮಾಹಿತಿ ಸಿಕ್ಕ ಕೂಡಲೇ ಬ್ಯಾಂಕ್​​ನ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಪೊಲೀಸರು ಸಿಸಿಟಿವಿ ಕ್ಯಾಮರಾ ವಿಡಿಯೊವನ್ನು ಪರಿಶೀಲಿಸಿದ್ದಾರೆ. ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕಳ್ಳರ ಬಂಧನಕ್ಕೆ ಬಲೆ ಬೀಸಿದ್ಧಾರೆ.

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!