ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ರಾತ್ರಿ ಬಿಗ್‌ಬಾಸ್ ಫಿನಾಲೆ ಮುಗಿದಿದ್ದು, ವಿನ್ನರ್ ಟ್ರೋಫಿಯನ್ನು ಹನುಮಂತು ಎತ್ತಿ ಹಿಡಿದಿದ್ದಾರೆ. ಇದೇ ಮೊದಲ ಬಾರಿಗೆ ವೈಲ್ಡ್ ಕಾರ್ಡ್ ಎಂಟ್ರಿಯೊಬ್ಬರಿಗೆ ವಿನ್ನರ್ ಟ್ರೋಫಿ ಸಿಕ್ಕಿದೆ.
ಬಿಗ್‌ಬಾಸ್ ಶುರುವಾದ 15 ದಿನಗಳ ನಂತರ ಹನುಮಂತ ಮನೆಯನ್ನು ಪ್ರವೇಶಿಸಿದ್ದರು. ಇಲ್ಲಿಯವರೆಗೆ ಶೋ ಆರಂಭಗೊಂಡಾಗ ಮನೆಯನ್ನು ಪ್ರವೇಶ ಮಾಡಿದ ಸ್ಪರ್ಧಿಗಳೇ ಬಿಗ್ ಬಾಸ್ ಟ್ರೋಫಿ ಗೆಲ್ಲುತ್ತಿದ್ದರು. ಆದರೆ ಬಿಗ್ ಬಾಸ್ ಇತಿಹಾಸದಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ಗೆದ್ದಿದ್ದು ಇದೇ ಮೊದಲು. ಟ್ರೋಫಿ ಜಯಿಸಿದ ಬಳಿಕ ವೇದಿಕೆಯಲ್ಲಿ ಮಾತನಾಡಿದ ಹನುಮಂತ, ದೇವರಾಣೆ ನಾನು ಗೆಲ್ಲುತ್ತೇನೆ ಅಂತ ಬಿಗ್ ಬಾಸ್ ಮನೆಗೆ ಬಂದಿರಲಿಲ್ಲ. ಹೋಗಿ ಮಜಾ ಮಾಡಿ ಬರೋಣ ಅಂತ ಬಂದಿದ್ದೆ ಎಂದು ತಿಳಿಸಿದರು.
ನಾನು ಗೆಲ್ತೀನಿ ಅಂತ ಗೊತ್ತಿದ್ದರೆ ಬಾಯಿ ಪಾಠ ಮಾಡಿಕೊಂಡು ಬರುತ್ತಿದ್ದೆ. ಆದರೆ ಈಗ ಏನು ಮಾತನಾಡಬೇಕು ಅಂತ ಗೊತ್ತಾಗುತ್ತಿಲ್ಲ. ದೇವರು, ಸುದೀಪ್ ಸರ್, ಕನ್ನಡ ನಾಡಿನ ಜನರ ಆಶೀರ್ವಾದದಿಂದ ನಾನು ಗೆದ್ದಿದ್ದಿದ್ದೇನೆ ಎಂದರು.