March 29, 2026
Sunday, March 29, 2026
spot_img

ಕೆಳಗೆ ಇಳಿಯೋ ಟೈಮ್ ಮುಗಿತು | ಮತ್ತೆ ಏರಿಕೆಯ ಹಾದಿ ಹಿಡಿದ ಬಂಗಾರ: ಸದ್ಯಕ್ಕೆ ಚಿನ್ನದ ಬೆಲೆ ಇಷ್ಟಿದೆ ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಏರಿಕೆ ಕಂಡುಬರುತ್ತಿದೆ.ಈಗ ವಾರಾಂತ್ಯದಲ್ಲಿ ಮತ್ತೊಮ್ಮೆ ಏರಿಕೆ ಕಂಡಿದ್ದು, ಗ್ರಾಂಗೆ ಸುಮಾರು 310ರೂ ರವರೆಗೆ ಏರಿಕೆಯಾಗಿದೆ. ಬೆಳ್ಳಿಯ ದರವೂ ಏರಿಕೆ ಕಂಡು, ಪ್ರತಿ ಗ್ರಾಂಗೆ 5 ರೂ ಹೆಚ್ಚಳವಾಗಿದೆ.

ಪ್ರಸ್ತುತ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,35,750 ರೂ ತಲುಪಿದೆ. 24 ಕ್ಯಾರಟ್ ಚಿನ್ನದ ದರ 1,48,090 ರೂ ಆಗಿದ್ದು, ಬೆಳ್ಳಿ 100 ಗ್ರಾಂಗೆ 24,500 ರೂ ಇದೆ. ಬೆಂಗಳೂರಿನಲ್ಲಿಯೂ ಇದೇ ದರಗಳು ಕಂಡುಬರುತ್ತಿವೆ.

ಇದನ್ನೂ ಓದಿ:

ಮಾರ್ಚ್ 29ರಂತೆ, 24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ 14,809 ರೂ ಇದ್ದು, 22 ಕ್ಯಾರಟ್ 13,575 ರೂ ಹಾಗೂ 18 ಕ್ಯಾರಟ್ 11,107 ರೂ ಮಾರಾಟವಾಗುತ್ತಿದೆ. ಬೆಳ್ಳಿ ಪ್ರತಿ ಗ್ರಾಂಗೆ 245ರೂ ಇದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆ ಏರಿಕೆಯಾಗಿದ್ದು, ದುಬೈ, ಅಮೆರಿಕ, ಸಿಂಗಾಪುರ ಸೇರಿದಂತೆ ಹಲವು ದೇಶಗಳಲ್ಲಿ ದರಗಳಲ್ಲಿ ವ್ಯತ್ಯಾಸ ಕಾಣಿಸುತ್ತಿದೆ. ಇದರ ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನದ ದರಗಳು ಹೆಚ್ಚುತ್ತಿರುವುದು ಗಮನಾರ್ಹ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !