ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಮಿಲಿಯನ್​ ಬಾರಿ ವೀಕ್ಷಣೆ ಕಂಡ ‘ಲಿಯೋ’ ಟ್ರೇಲರ್​

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಲಿಯೋ’ ಚಿತ್ರ ಕೂಡ ಇದೆ. ಈ ಸಿನಿಮಾದಲ್ಲಿ ದಳಪತಿ ವಿಜಯ್​ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಬಹು ತಾರಾಗಣದ ಈ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದ್ದು, ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಲಿಯೋ ಟ್ರೇಲರ್​ಗೆ ಮಿಲಿಯನ್​ಗಟ್ಟಲೆ ವೀವ್ಸ್​ ಸಿಕ್ಕಿದೆ. ಹಾಗಾಗಿ ಯೂಟ್ಯೂಬ್​ನಲ್ಲಿ ಈ ಟ್ರೇಲರ್​ ದಾಖಲೆ ಬರೆಯುವ ಸೂಚನೆ ಸಿಕ್ಕಿದೆ.

ತಮಿಳಿನ ಈ ಸಿನಿಮಾ ಕನ್ನಡ, ತೆಲುಗು, ಹಿಂದಿಗೆ ಡಬ್​ ಆಗಿ ಬಿಡುಗಡೆ ಆಗುತ್ತಿದೆ. ಈ ಎಲ್ಲ ಭಾಷೆಗಳಲ್ಲಿ ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಸಂಜಯ್​ ದತ್​, ಅರ್ಜುನ್ ಸರ್ಜಾ, ದಳಪತಿ ವಿಜಯ್​ ಮುಂತಾದವರು ಈ ಟ್ರೇಲರ್​ನಲ್ಲಿ ಅಬ್ಬರಿಸಿದ್ದಾರೆ. ಈ ಸಿನಿಮಾಗೆ ತ್ರಿಷಾ ಕೃಷ್ಣನ್​ ನಾಯಕಿ. ಖ್ಯಾತ ನಿರ್ದೇಶಕ ಲೋಕೇಶ್​ ಕನಗರಾಜ್​ ಅವರು ‘ಲಿಯೋ’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ.

ಆ್ಯಕ್ಷನ್​ ಪ್ರಿಯರಿಗೆ ಇಷ್ಟ ಆಗುವ ರೀತಿಯಲ್ಲಿ ಈ ಸಿನಿಮಾದ ಟ್ರೇಲರ್​ ಮೂಡಿಬಂದಿದ್ದು, ದಳಪತಿ ವಿಜಯ್​ ಅವರ ಪಾತ್ರದ ರೀತಿಯೇ ಅರ್ಜುನ್ ಸರ್ಜಾ ಅವರ ಗೆಟಪ್​ ಕೂಡ ಗಮನ ಸೆಳೆಯುವಂತಿದೆ. ಕಥೆಯ ಬಗ್ಗೆ ಟ್ರೇಲರ್​ನಲ್ಲಿ ಸುಳಿವು ಬಿಟ್ಟುಕೊಡಲಾಗಿದ್ದು, ಟ್ರೇಲರ್​ ನೋಡಿದ ದಳಪತಿ ವಿಜಯ್​ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!