ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣ: ನ್ಯಾಯಾಂಗ ತನಿಖೆಗೆ ಒಪ್ಪಿಸಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಒತ್ತಾಯ

ಹೊಸ ದಿಗಂತ ವರದಿ, ಶಿವಮೊಗ್ಗ:

ನಗರದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದಿರುವ ಕಲ್ಲು ತೂರಾಟ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಒತ್ತಾಯಿಸಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ರಾಗಿಗುಡ್ಡದಲ್ಲಿ ನಡೆದಿರುವುದು ಪೂರ್ವ ನಿಯೋಜಿತ ಕೃತ್ಯ. ಈದ್ ಮಿಲಾದ್ ಆಚರಣೆ ನೆಪದಲ್ಲಿ ಹಿಂದೂ ಮನೆಗಳ ಮೇಲೆ, ಮಹಿಳೆ, ಮಕ್ಕಳು, ವೃದ್ಧರ ಮೇಲೆ ದಾಳಿ ನಡೆಸಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಕಾರಕ್ಕೆ ಬಂದ ಮೇಲೆ, ಅದರಲ್ಲಿಯೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಮೇಲೆ ರಾಜ್ಯದಲ್ಲಿ ಐದಾರು ಕಡೆ ಇಂತಹ ಕೃತ್ಯ ನಡೆದಿದೆ ಎಂದು ದೂರಿದರು.

ಈದ್ ಮಿಲಾದ್‌ಗೂ ಮೊದಲು ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ರಾಜ್ಯಾದ್ಯಂತ ಗಣೇಶ ಪ್ರತಿಷ್ಠಾಪನೆ, ಗಣೇಶ ಮೆರವಣಿಗೆಗಳು ಶಾಂತಿಯುತವಾಗಿ ನಡೆದಿವೆ. ರಾಗಿಗುಡ್ಡದಲ್ಲೂ ಗಣೇಶೋತ್ಸವ ಯಶಸ್ವಿಯಾಗಿ ನಡೆದಿದೆ. ಬಳಿಕ ಈದ್ ಮಿಲಾದ್‌ಗೂ ವಿಶೇಷ ಅಲಂಕಾರ ಮಾಡಿದ್ದಾರೆ. ಆಗ ಹಿಂದೂ ಹತ್ಯೆಯ ಕಟೌಟ್, ಅಖಂಡ ಭಾರತ ಭೂಪಟದ ಮಧ್ಯದಲಿ ಹಸಿರು ಬಣ್ಣ ತುಂಬಿ ಸಾಬರ ಸಾಮ್ರಾಜ್ಯ, ಟಿಪ್ಪು, ಔರಂಗಜೇಬ್ ಕಟೌಟ್‌ಗಳು, ಖಡ್ಗ ಅಳವಡಿಸಿರುವುದು ಇವೆಲ್ಲಾ ಭಾವನೆಗಳನ್ನು ಕೆರಳಿಸುವ ಉದ್ದೇಶವನ್ನೇ ಹೊಂದಿದ್ದವು ಎಂದು ದೂರಿದರು.

ಮಾಜಿ ಡಿದಿಎಂ ಕೆ.ಎಸ್.ಈಶ್ವರಪ್ಪ, ಪ್ರಮುಖರಾದ ಡಾ.ಅಶ್ವತ್ಥನಾರಾಯಣ, ಚನ್ನಬಸಪ್ಪ, ಸಂಸದ ರಾಘವೇಂದ್ರ, ಆರಗ ಜ್ನಾನೇಂದ್ರ ಇನ್ನಿತರರು ಇದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!