ನಿಲ್ದಾಣದಲ್ಲಿ ನಿಲ್ಲದ ರೈಲು: ಹಳಿಯ ಮೇಲೆ ಕುಳಿತು ಪ್ರತಿಭಟನೆ!

ಹೊಸದಿಗಂತ ವರದಿ,ಅಂಕೋಲಾ:

ಇತ್ತೀಚೆಗೆ ಪುನರಾರಂಭಿಸಿರುವ ಮಂಗಳೂರು ಮಡಗಾಂವ್ ಪ್ಯಾಸೆಂಜರ್ ಮೆಮು ರೈಲಿಗೆ ಅಂಕೋಲಾ ತಾಲೂಕಿನ ಹಾರವಾಡ, ಕುಮಟಾದ ಮಿರ್ಜಾನ ಮತ್ತು ಭಟ್ಕಳದ ಚಿತ್ರಾಪುರ ನಿಲ್ದಾಣಗಳಲ್ಲಿ ನಿಲುಗಡೆ ರದ್ದು ಗೊಳಿಸಿರುವುದನ್ನು ಖಂಡಿಸಿ ಜನಶಕ್ತಿ ವೇದಿಕೆ ಕಾರವಾರ ಮತ್ತು ಅವರ್ಸಾ ಸುತ್ತ ಮುತ್ತಲಿನ ಜನಪ್ರತಿನಿಧಿಗಳು ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರ ನೇತೃತ್ವದಲ್ಲಿ ಹಾರವಾಡ ರೈಲ್ವೆ ನಿಲ್ದಾಣದಲ್ಲಿ ರೈಲು ತಡೆದು ಪ್ರತಿಭಟನೆ ನಡೆಸಿದರು.

ರೈಲ್ವೆ ಹಳಿಯ ಮೇಲೆ ಕುಳಿತು ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಹಾರವಾಡದಲ್ಲಿ ಮೆಮು ರೈಲು ನಿಲುಗಡೆಗೆ ಒತ್ತಾಯಿಸಿದರಲ್ಲದೇ ನಿಲ್ದಾಣದಲ್ಲಿ ಸಮರ್ಪಕ ಪ್ಲಾಟ್ ಫಾರ್ಮ್ ವ್ಯವಸ್ಥೆ ಕಲ್ಲಿಸುವಂತೆ ಆಗ್ರಹಿಸಿದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಕ್ರಿ ಗೌಡ ಮತ್ತು ತುಳಸಿ ಗೌಡ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಕೊಂಕಣ ರೈಲ್ವೆ ಪ್ರಾದೇಶಿಕ ವ್ಯವಸ್ಥಾಪಕರು ಸಮಸ್ಯೆ ಪರಿಹಾರಕ್ಕೆ 10 ದಿನಗಳ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಮಾಜಿ ಶಾಸಕ ಸತೀಶ ಸೈಲ್ , ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ರಾಜೀವ್ ಗಾಂವಕರ್ ಹೀರೆಗುತ್ತಿ, ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್ ಹಾರವಾಡ, ಅವರ್ಸಾ, ಹಟ್ಟಿಕೇರಿ ಸುತ್ತ ಮುತ್ತಲಿನ ಗ್ರಾಮಗಳ ಜನಪ್ರತಿನಿಧಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!