CINE | ಕನಸಾಗೇ ಉಳಿದ ಟ್ರೋಫಿ, ಆಸ್ಕರ್‌ ರೇಸ್‌ನಿಂದ ಹೊರಬಿದ್ದ ʼಲಾಪತಾ ಲೇಡೀಸ್‌ʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ಲಾಪತಾ ಲೇಡೀಸ್‌ ಸಿನಿಮಾ ಆಸ್ಕರ್‌ ರೇಸ್‌ನಿಂದ ಹೊರಬಿದ್ದಿದೆ. ಸಿಂಪಲ್‌ ಆದ ಕಾನ್ಸೆಪ್ಟ್‌ನ್ನು ಇಟ್ಟುಕೊಂಡು ಒಂದು ಅದ್ಭುತ ಸಿನಿಮಾ ತಯಾರಾಗಿದ್ದು, ಸೆಲೆಬ್ರಿಟಿಗಳು, ಜನರು ಈ ಸಿನಿಮಾವನ್ನು ಮೆಚ್ಚಿದ್ದರು. ಸಿನಿಮಾ ಆಸ್ಕರ್‌ ಮೆಟ್ಟಿಲೇರಿದ್ದಕ್ಕೆ ಸಂತಸ ಪಟ್ಟಿದ್ದರು. ಆದರೆ ಆಸ್ಕರ್‌ ಕನಸು ಕನಸಾಗಿಯೇ ಉಳಿದಿದೆ.

Oscars 2025: India's Laapataa Ladies fails to feature in shortlist, out of  Best International Feature category | Bollywood - Hindustan Times

‘ಲಾಪತಾ ಲೇಡೀಸ್’ ಸಿನಿಮಾ ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಇಷ್ಟ ಪಟ್ಟ ಸಿನಿಮಾಗಳಲ್ಲಿ ಒಂದು. ಈ ಸಿನಿಮಾ ನೋಡಿ ಜನರು ಮೆಚ್ಚಿಕೊಂಡರು. ಈ ಚಿತ್ರ ಭಾರತದಿಂದ ಅಧಿಕೃತವಾಗಿ ಆಸ್ಕರ್​ಗೆ ನಾಮಿನೇಟ್ ಆಯಿತು. ‘ವಿದೇಶಿ ಸಿನಿಮಾ’ ವಿಭಾಗಕ್ಕೆ ಈ ಚಿತ್ರ ಕಳುಹಿಸಲಾಯಿತು. ಬುಧವಾರ (ಡಿಸೆಂಬರ್ 18) ಈ ಬಗ್ಗೆ ಘೋಷಣೆ ಆಗಿದ್ದು, ಸಿನಿಮಾ ಟಾಪ್ 15ರಲ್ಲಿ ಬರಲೂ ಅನರ್ಹವಾಗಿದೆ.

Laapataa Ladies is India's official entry for Oscars 2025; defeats Kalki  2898 AD, Animal - BusinessToday

ಮಾರ್ಚ್ 2ರಂದು ಆಸ್ಕರ್ ಅವಾರ್ಡ್ ಕಾರ್ಯಕ್ರಮ ಅಮೆರಿಕದಲ್ಲಿ ನಡೆಯಲಿದೆ. ‘ಆಸ್ಕರ್ ಅವಾರ್ಡ್’ ನಾಮಿನೇಷನ್ ಜನವರಿ 17ರಂದು ಘೋಷಣೆ ಆಗಲಿದೆ. ಮಾರ್ಚ್ 2ರಂದು ಅದ್ದೂರಿ ಈವೆಂಟ್​ನಲ್ಲಿ ವಿನ್ನರ್​ಗಳ ಹೆಸರು ಘೋಷಣೆ ಆಗಲಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!