ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂರು ವರ್ಷಗಳ ಕಾಲ ಪ್ರೀತಿಸಿ ನಟಿ ಸೋಭಿತಾ ಧುಲಿಪಾಲ ಹಾಗೂ ನಾಗಚೈತನ್ಯ ಮದುವೆಯಾಗಿದ್ದಾರೆ. ಮದುವೆಯ ನಂತರ ನಟ ನಾಗಚೈತನ್ಯ ಸೋಭಿತಾಗೆ ಒಂದು ಕಂಡೀಷನ್ ಹಾಕಿದ್ದಾರಂತೆ. ಅದನ್ನು ಫುಲ್‌ಫಿಲ್ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದಾರಂತೆ.
ಹೌದು, ನಾಗಚೈತನ್ಯ ಮನೆಯಲ್ಲಿ ನಾಗಚೈತನ್ಯರನ್ನು ಹೊರತುಪಡಿಸಿ ಎಲ್ಲರೂ ಇಂಗ್ಲಿಷ್‌ನಲ್ಲಿ ಮಾತನಾಡುತ್ತಾರಂತೆ. ಆದರೆ ನಾಗಚೈತನ್ಯ ತೆಲುಗುನಲ್ಲಿ ಮಾತನಾಡಿ ಎಂದು ಎಲ್ಲರಿಗೂ ಹೇಳ್ತಾರಂತೆ. ಬಟ್ ಇದು ಸಾಧ್ಯವಾಗಿಲ್ಲ. ಸೋಭಿತಾ ಕೂಡ ಎಲ್ಲರ ಜೊತೆ ಇಂಗ್ಲಿಷ್‌ನಲ್ಲಿ ಮಾತನಾಡೋದು ನಾಗಚೈತನ್ಯಗೆ ಇಷ್ಟವಿಲ್ಲವಂತೆ.
ಹೀಗಾಗಿ ಸೋಭಿತಾಗೆ ತೆಲುಗು ಕಲಿಯಲೇಬೇಕು ಎಂದು ನಾಗಚೈತನ್ಯ ಹೇಳಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸೋಭಿತಾ ಕೂಡ ತೆಲುಗು ಕಲಿಯುತ್ತಿದ್ದಾರಂತೆ.