ಹಕ್ಕಿ ಹಾರುವಾಗ ಬಳಸುವ ತಂತ್ರದ ಬಗ್ಗೆ ನಿಮಗೆ ಗೊತ್ತಾ..? ಈ ವಿಡಿಯೊ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಕ್ಕಿ ಹಾರುವುದನ್ನು ನೀವು ಎಂದಾದರೂ ಹತ್ತಿರದಿಂದ ನೋಡಿದ್ದೀರಾ? ಇಲ್ಲವಾದಲ್ಲಿ ತಪ್ಪದೇ ಈ ವೀಡಿಯೊವನ್ನು ನೋಡಿ. ಏಕೆಂದರೆ ಸಾಮಾನ್ಯವಾಗಿ ಪಕ್ಷಿಗಳು ಗಾಳಿಯಲ್ಲಿ ಹಾರಲು ಯಾವ ತಂತ್ರವನ್ನು ಬಳಸುತ್ತವೆ ಎಂದು ಯಾರಿಗೂ ತಿಳಿದಿರುವುದಿಲ್ಲ. ದೊಡ್ಡ ಹಕ್ಕಿಗಳಿಂದ ಹಿಡಿದು ಸಣ್ಣ ಹಕ್ಕಿಗಳವರೆಗೆ ಗಾಳಿಯಲ್ಲಿ ಹಾರುವಾಗ ಕೆಳಗೆ ಬೀಳದಂತೆ ಯಾವ ತಂತ್ರವನ್ನು ಬಳಸಲಾಗಿದೆ ಎಂಬುದನ್ನು ಈ ವೀಡಿಯೊದಲ್ಲಿ ನೀವು ಹತ್ತಿರದಿಂದ ನೋಡಬಹುದು. ಸಾವಿರಾರು ಅಡಿ ಎತ್ತರದಲ್ಲಿ ರಣಹದ್ದು ಹಾರುತ್ತಿರುವಾಗ ಈ ವೀಡಿಯೊವನ್ನು ತೀರಾ ಹತ್ತಿರದಿಂದ ರೆಕಾರ್ಡ್ ಮಾಡಲಾಗಿದೆ.

ಗಾಳಿಯಲ್ಲಿ ಹಾರುತ್ತಿರುವ ರಣಹದ್ದು ತನ್ನ ದೇಹದ ಹಿಂಭಾಗವನ್ನು ಮೇಲೆ ಮತ್ತು ಕೆಳಗೆ, ಬಲ-ಎಡಕ್ಕೆ ಆಡಿಸುತ್ತಾ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ. ಜೊತೆಗೆ ಗಾಳಿಯಲ್ಲಿ ತಾನು ಹಾರುವ ದಿಕ್ಕನ್ನು ಸಹ ಸರಿದೂಗಿಸಿಕೊಳ್ಳುತ್ತಿದೆ. ಅಚ್ಚರಿಯೆಂದರೆ, ಹಕ್ಕಿಯ ರೆಕ್ಕೆಗಳು ತುಂಬಾ ದೊಡ್ಡದಾಗಿರುವುದರಿಂದ ಅವುಗಳ ಮೂಲಕ ಗಾಳಿ ಸುಲಭವಾಗಿ ಹೋಗುತ್ತದೆ. ಆದ್ದರಿಂದಲೇ ಪದೇ ಪದೇ ರಣಹದ್ದುಗಳು ಹೆಚ್ಚಾಗಿ ತನ್ನ ರೆಕ್ಕೆಗಳನ್ನು ಆಡಿಸುವ ಅಗತ್ಯವಿಲ್ಲದೆ ಹಾರುತ್ತಿರುತ್ತವೆ. ಆದರೆ ಪುಟ್ಟ ಹಕ್ಕಿಗಳು ಹಾಗಲ್ಲ ರೆಕ್ಕೆ ಬಡಿಯುತ್ತಲೇ ಹಾರಬೇಕು.

ಗ್ರೇಟ್ ಪ್ಲಾನೆಟ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದೆ. ಈ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಹಕ್ಕಿಯೊಂದಿಗೆ ಸಾವಿರಾರು ಅಡಿ ಎತ್ತರದಲ್ಲಿ ಹಾರುತ್ತಿರುವುದನ್ನು ಕಾಣಬಹುದು. ಅವರು ಹಾರಲು ಪ್ಯಾರಾಗ್ಲೈಡರ್ ಫ್ಲೈಯಿಂಗ್ ವಿಟ್ಗ್ ಅನ್ನು ಬಳಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು 14 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!