18 ವರ್ಷದೊಳಗಿನವರು ಮೊಬೈಲ್ ಬಳಸದಂತೆ ಆದೇಶ: ನಿಯಮ ಉಲ್ಲಂಘಿಸಿದರೆ ದಂಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

18 ವರ್ಷದೊಳಗಿನವರು ಮೊಬೈಲ್ ಬಳಸುವಂತಿಲ್ಲ ಎಂದು ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಬನ್ಸಿ ಗ್ರಾಮ ಈ ನಿರ್ಧಾರ ಕೈಗೊಂಡ ಮೊದಲ ಗ್ರಾಮ ಪಂಚಾಯಿತಿ ಎಂದೆನಿಸಿದೆ. ಆ ಊರಿನ ಹಿರಿಯರ ನಿರ್ಧಾರಕ್ಕೆ ಯುವಕರಿಂದ ವಿರೋಧ ಬರುತ್ತದೆಯೇ? ಅಂದರೆ ಹೌದು ಖಂಡಿತಾ ಈಗಿನವರಿಗೆ ಊಟ, ನಿದ್ದೆ ಬಿಡಿ ಅಂದರೆ ಬಿಡೋಕೆ ಸಿದ್ದ ಇರುತ್ತಾರೆ ಆದರೆ ಮೊಬೈಲ್‌ ಮಾತ್ರ ಬಿಡಿವುದಿಲ್ಲ ಅಷ್ಟೊಂದು ಅಡಿಕ್ಟ್‌ ಆಗಿದ್ದಾರೆ ಅಂತಾರೆ ಗ್ರಾಮಸ್ಥರು.

ಕೋವಿಡ್ ಸಮಯದಲ್ಲಿ ಮಕ್ಕಳು ಆನ್‌ಲೈನ್ ತರಗತಿಗಳಿಗೆ ಮೊಬೈಲ್ ಫೋನ್ ಬಳಸಲು ಪ್ರಾರಂಭಿಸಿದರು ಅಂದಿನಿಂದ ಶಾಲೆ ಪ್ರಾರಂಭವಾದರೂ ಮೊಬೈಲ್‌ ಬಳಕೆ ಮಾತ್ರ ಬಿಟ್ಟಿಲ್ಲ ಎಂದು ಗ್ರಾಮದ ಸರಪಂಚ್ ಗಜಾನನ ಹೇಳಿದರು. ಶಿಕ್ಷಣಕ್ಕಾಗಿ ಆರಂಭಿಸಿರುವ ಫೋನ್ ಗಳು ಮಕ್ಕಳಿಗೂ ಅದೇ ಫೋನ್ ಆಗಿದ್ದು, ಆನ್ ಲೈನ್ ಗೇಮ್ ಹಾಗೂ ಇತರೆ ಸೈಟ್ ಗಳನ್ನು ನೋಡುತ್ತಾ ಸಮಯ ವ್ಯರ್ಥ ಮಾಡುತ್ತಿದ್ದು, ಶಿಕ್ಷಣದ ಬಗ್ಗೆಯೂ ಕಾಳಜಿ ವಹಿಸುತ್ತಿಲ್ಲ, ಅದಕ್ಕಾಗಿಯೇ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದರು. ಮಕ್ಕಳ ಭವಿಷ್ಯಕ್ಕಾಗಿ ಇಂತಹ ನಿರ್ಧಾರ ಕೈಗೊಳ್ಳಲಾಗಿದೆಯೇ ಹೊರತು ಅವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಅಲ್ಲ ಎಂದು ಸ್ಪಷ್ಟಪಡಿಸಿದರು. ಇಂತಹ ವಿನೂತನ ನಿರ್ಧಾರ ಕೈಗೊಂಡ ಮೊದಲ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ನಮ್ಮ ಗ್ರಾಮ ಪಾತ್ರವಾಗಿದೆ ಎಂದರು.

ಈ ನಿರ್ಧಾರವನ್ನು ಕಾರ್ಯಗತಗೊಳಿಸಲು ವಿರೋಧವಿರುತ್ತದೆ. ಹಾಗಾಗಿ ಇದನ್ನು ಕಾರ್ಯರೂಪಕ್ಕೆ ತರಲು ಮಕ್ಕಳಿಗೆ ಹಾಗೂ ಪೋಷಕರಿಗೆ ಕೌನ್ಸೆಲಿಂಗ್ ನೀಡುತ್ತಿದ್ದೇವೆ ಎಂದರು. ಕೌನ್ಸೆಲಿಂಗ್ ನಂತರವೂ ಮಕ್ಕಳು ಮೊಬೈಲ್ ಬಳಸಿದರೆ ದಂಡ ವಿಧಿಸಲು ಹಿಂಜರಿಯುವುದಿಲ್ಲ ಎಂದು ಸರಪಂಚ್ ಗಜಾನನ ಸ್ಪಷ್ಟಪಡಿಸಿದರು. ಮಕ್ಕಳನ್ನು ಮತ್ತೆ ವಿದ್ಯಾಭ್ಯಾಸದತ್ತ ಸೆಳೆಯುವುದು ಈ ನಿರ್ಧಾರದ‌ ಸ್ಪಷ್ಟ ಉದ್ದೇಶವಾಗಿದೆ ಎಂದು ಸರಪಂಚ್ ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!