‘ವೀಸಾ’ ಮುಗಿದ ಬಳಿಕವೂ ಇನ್ನೂ ಭಾರತದಲ್ಲೇ ಇದ್ದಾರೆ 3,93,421 ಮಂದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೀಸಾ ಅವಧಿ ಮುಕ್ತಾಯವಾದ ಬಳಿಕವೂ ಭಾರತದಲ್ಲಿ ವಾಸಿಸುತ್ತಿರುವರ ಸಂಖ್ಯೆ ಎಷ್ಟು ಗೊತ್ತಾ?
ಬರೋಬ್ಬರಿ  3,93,421  !
ಎಸ್, ಈ ಮಾಹಿತಿಯನ್ನು ಮಂಗಳವಾರ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಲೋಕಸಭೆಗೆ ನೀಡಿದ್ದಾರೆ. ಆಘಾತಕಾರಿ ಅಂಶ ಎಂದರೆ, 2019ರಲ್ಲಿ ವೀಸಾ ಅವಧಿ ಮೀರಿದ ಬಳಿಕವೂ 25,143 ವಿದೇಶಿಗರು ಭಾರತದಿಂದ ತಮ್ಮ ದೇಶಗಳಿಗೆ ಹಿಂದಿರುಗಿಲ್ಲ.
2020ರಲ್ಲಿ ವೀಸಾ ಅವಧಿ ಕೊನೆಗೊಂಡ 40,239, 2021ರಲ್ಲಿ ವೀಸಾ ಅವ ಮುಗಿದ 54,576 ವಿದೇಶಿಗರು ಇನ್ನೂ ಭಾರತದಲ್ಲಿಯೇ ಇದ್ದಾರೆ. 2019ರಿಂದ ಡಿಸೆಂಬರ್ 31, 2021ರ ವರೆಗೆ ವೀಸಾ ಅವಧಿ ಮುಗಿದ ಬಳಿಕವೂ ಇಲ್ಲಿರುವ ವಿದೇಶಿಗರ ಸಂಖ್ಯೆ 3,93,421 ಎಂದು ಸಚಿವ ರೈ ಪ್ರಶ್ನೆಯೊಂದಕ್ಕೆ ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ.
ಅಕ್ರಮವಾಗಿ ನೆಲೆಸಿರುವವರ ಮೇಲೆ ವಿದೇಶೀಯರ ಕಾಯಿದೆ, 1946ರ ಅಡಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಈ ಪೈಕಿ ವಿದೇಶಿಯರ ಹೆಸರನ್ನು ದೇಶದಿಂದ ಗಡೀಪಾರು ಮಾಡುವುದನ್ನು ಖಾತ್ರಿಪಡಿಸಿದ ನಂತರ ಬ್ಲ್ಯಾಕ್ ಲಿಸ್ಟ್‌ನಲ್ಲಿ ಸೇರಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!