ಮುಂಗಾರು ಅಬ್ಬರಕ್ಕೆ ದಿಕ್ಕು ತೋಚದೆ ವಿಡಿಯೋ ಕಾಲ್​​ ಮೂಲಕವೇ ನಡೆಯಿತು ಮದುವೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಉತ್ತರ ಭಾರತದಲ್ಲಿ ಮುಂಗಾರು ಅಬ್ಬರಿಸುತ್ತಿದ್ದು, ಹಿಮಾಚಲ ಪ್ರದೇಶದಲ್ಲೂ ಭಾರೀ ಮಳೆ ಸುರಿಯುತ್ತಿದೆ. ಅನೇಕ ರಸ್ತೆಗಳಿಗೆ ಹಾನಿಯಾಗಿದ್ದು, ಜನರ ಸಂಚಾರಕ್ಕೂ ಅಡಚಣೆಯಾಗಿದೆ. ಹಲವರ ಪ್ರಾಣವನ್ನುಕಳೆದುಕೊಂಡಿದ್ದಾರೆ.

ನಿರಂತರ ಮಳೆಯಿಂದಾಗಿ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದು, ಅನೇಕ ಸಮಾರಂಭಗಳು ಕೂಡ ನಿಂತಿವೆ. ಹೀಗೆ ಮಳೆಯ ಅಬ್ಬರಕ್ಕೆ ಅದ್ದೂರಿಯಾಗಿ ಆಗಬೇಕಿದ್ದ ಮದುವೆಯೊಂದು ಕೂಡ ನಿಂತು. ಕೊನೆಗೂ ಆನ್ ಲೈನ್ ಮೂಲಕ ನಡೆದ ಘಟನೆ ನಡೆದಿದೆ.

ಹೌದು, ಹಿಮಾಚಲ ಪ್ರದೇಶದಲ್ಲಿ ಮದುವೆಯೊಂದು ಭರ್ಜರಿ ಸುದ್ದಿ ಮಾಡಿದೆ. ಶಿಮ್ಲಾದ ಆಶಿಶ್​ ಸಿಂಘಾ ಎಂಬ ವರನಿಗೂ, ಕಲ್ಲುವಿನ ಭಂಟರ್​ ನಿವಾಸಿ ಶಿವಾನಿ ಠಾಕೂರ್​ ಎಂಬ ವಧುವಿಗೂ ವಿಡಿಯೊ ಕಾನ್ಫರೆನ್ಸ್​ನಲ್ಲಿ ಮದುವೆ (Online Marriage) ಮಾಡಲಾಗಿದೆ.

ಇಂದು ಮದುವೆ ನಿಗದಿಯಾಗಿತ್ತು. ವರ ಆಶಿಶ್ ಸಿಂಘಾ ಅವರು ಸೋಮವಾರ ಮೆರವಣಿಗೆ ಮೂಲಕ ವಧುವಿನ ಮನೆ ಇರುವ ಭಂಟರ್​ಗೆ ತೆರಳಬೇಕಿತ್ತು. ಆದರೆ ಕುಲ್ಲು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಮಿತಿಮೀರಿದೆ. ಜನರು ಮನೆ ಬಿಟ್ಟು ರಸ್ತೆಗೆ ಇಳಿಯ ಸ್ಥಿತಿ ಇದೆ. ಹೀಗಾಗಿ ವರನಿಗೆ ವಧುವಿನ ಮನೆಗೆ ಬರಲು ಸಾಧ್ಯವಾಗಲಿಲ್ಲ. ಇಟ್ಟ ಮುಹೂರ್ತ ತಪ್ಪಿಸಬಾರದು ಎಂಬ ಕಾರಣಕ್ಕೆ ಎರಡೂ ಕುಟುಂಬದವರು ಸೇರಿ ಆನ್​ಲೈನ್​​ನಲ್ಲಿಯೇ ಮದುವೆ ಮಾಡಿಸಿದ್ದಾರೆ. ವರ ತಮ್ಮ ಮನೆಯಲ್ಲೇ ಕುಳಿತಿದ್ದ, ವಧು ಆಕೆಯ ಮನೆಯಲ್ಲೇ ಇದ್ದಳು. ಇವರಿಬ್ಬರೂ ವಿಡಿಯೊ ಕಾನ್ಫರೆನ್ಸ್ ಮೂಲಕ ಪರಸ್ಪರ ಮುಖ ನೋಡಿಕೊಂಡು-ಮದುವೆಯಾಗಿದ್ದಾರೆ.

2020-2021ರಲ್ಲಿ ಕೊವಿಡ್​ 19 ಸಾಂಕ್ರಾಮಿಕ ಇದ್ದ ಕಾಲದಲ್ಲಿ ಐದಾರು ಕಡೆ ಹೀಗೆ ಆನ್​ಲೈನ್ ಮದುವೆ ನಡೆದಿತ್ತು. ಹೈದರಾಬಾದ್​ನ ಕೊಟ್ಟಂಗುಂಡನಲ್ಲಿರುವ ವಧುವಿಗೂ, ಸೌದಿ ಅರೇಬಿಯಾದಲ್ಲಿರುವ ಯುವಕನಿಗೂ ಆನ್​ಲೈನ್​​ನಲ್ಲೇ ಮದುವೆ ಶಾಸ್ತ್ರ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!