ಗಂಡನ ಸಂಬಳ ತಿಳಿಯೋಕೆ ಆರ್‌ಟಿಐ ಮೊರೆ ಹೋದ ಹೆಂಡತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏನೇ ಆಗಲಿ ಗಂಡಸರು ತಮಗೆ ಎಷ್ಟು ಸಂಬಳ ಬರುತ್ತದೆ ಅನ್ನೋ ಮಾಹಿತಿಯನ್ನು ಯಾರ ಬಳಿಯೂ ಬಿಟ್ಟುಕೊಡೋದಿಲ್ಲ. ಅಂದಾಜು ಇಷ್ಟಿರಬಹುದು ಎಂದು ಹೇಳಿ ಸುಮ್ಮನಾಗುತ್ತಾರೆಯೇ ಹೊರತು ಇಷ್ಟೇ ಬರುತ್ತದೆ ಎಂದು ಸರಿಯಾದ ಸಂಖ್ಯೆಯನ್ನು ಹೇಳೋದಿಲ್ಲ.

ಆದರೆ ಗಂಡನ ಸಂಬಳ ಎಷ್ಟಿದೆ ಎಂದು ತಿಳಿಯೋದು ಈಗ ದೊಡ್ಡ ವಿಷ ಏನಲ್ಲಾ, ಇಲ್ಲಿ ಹೆಂಡತಿಯೊಬ್ಬಳು ಆರ್‌ಟಿಐ ಮೂಲಕ ತನ್ನ ಗಂಡನ ಸಂಬಳದ ಮಾಹಿತಿ ತಿಳಿದುಕೊಂಡಿದ್ದಾಳೆ.

ಗಂಡನಿಂದ ವಿಚ್ಛೇದನ ಪಡೆಯಲು ನಿರ್ಧರಿಸಿದ ಪತ್ನಿ ಸಂಬಳದ ಮಾಹಿತಿ ಕೇಳಿದ್ದು, ಮಾಹಿತಿ ನೀಡಲು ಪತಿ ನಿರಾಕರಿಸಿದ್ದ. ಹಾಗಾಗಿ ಆರ್‌ಟಿಐ ಮೂಲಕ ಸಂಬಳದ ಮಾಹಿತಿ ಪಡೆಯಲು ಪತ್ನಿ ನಿರ್ಧರಿಸಿದ್ದಳು. ಸಂಜು ಗುಪ್ತಾ ಎಂಬ ಮಹಿಳೆ ವಿಚ್ಛೇದನ ಕಾರಣಕ್ಕಾಗಿ ತನ್ನ ಪತಿಯ ಸಂಬಳದ ಮಾಹಿತಿಯನ್ನು ಪಡೆದಿದ್ದಾರೆ.

ಮೊದಲು ಪತಿ ಒಪ್ಪದ ಕಾರಣ ತೆರಿಗೆ ಅಧಿಕಾರಿಗಳು ಮಾಹಿತಿ ನೀಡಲು ನಿರಾಕರಿಸಿದ್ದರು. ಮೇಲ್ಮನವಿ ಸಲ್ಲಿಸಿದ ಸಂಜು ಎಫ್‌ಎಎ ಸಹಾಯ ಕೋರಿದ್ದರು. ಇದರಿಂದಾಗ ಪತಿಯ ಸಂಬಳದ ಮಾಹಿತಿ ತಿಳಿದುಕೊಂಡಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!