ಹೆಂಡ್ತಿ ಹತ್ರ ಹೊಡೆತ ತಿನ್ನೋಕಾಗ್ತಿಲ್ಲ, ಹೆಲ್ಪ್ ಮಾಡಿ.. ಪೊಲೀಸರ ಮೊರೆ ಹೋದ ವೈದ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನನ್ನ ಹೆಂಡತಿ ನನಗೆ ಹೊಡೆಯುತ್ತಾಳೆ, ಈ ಹಿಂಸೆ ತಾಳೋಕೆ ಆಗ್ತಿಲ್ಲ, ದಯವಿಟ್ಟು ಸಹಾಯ ಮಾಡಿ ಎಂದು ಗಂಡನೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಉತ್ರಪ್ರದೇಶದ ಲಕ್ನೋದ ವೈದ್ಯರೊಬ್ಬರು ಠಾಣೆಗೆ ಬಂದಿದ್ದು, ಹೆಂಡತಿ ದೊಡ್ಡ ಸೌಂಡ್ ಕೊಟ್ಟು ಟಿವಿಯಲ್ಲಿ ಹಾಡು ಕೇಳ್ತಾಳೆ, ಸೌಂಡ್ ಕಡಿಮೆ ಮಾಡೋಕೆ ಹೇಳಿದ್ರೆ ಹೊಡೆಯುತ್ತಾಳೆ. ಹಾಡಿನ ಹುಚ್ಚು ಹೆಚ್ಚಾಗಿದೆ, ಹಗಲು ರಾತ್ರಿ ಎನ್ನದೇ ದೊಡ್ಡ ಸೌಂಡ್‌ನಲ್ಲಿ ಹಾಡು ಕೇಳುತ್ತಾಳೆ, ನಾನು ವೈದ್ಯ ವೃತ್ತಿಯ ಕಡೆ ಗಮನಕೊಡಲು ಕಷ್ಟವಾಗಿದೆ, ನಿದ್ದೆಯೂ ಇಲ್ಲದಂತಾಗಿದೆ. ಸಿಟ್ಟಿನಿಂದ ಆಕೆ ನನಗೆ ಹೊಡೆದು ಮನೆಯೆಲ್ಲಾ ಚೆಲ್ಲಾಪಿಲ್ಲಿ ಮಾಡುತ್ತಾಳೆ.

ಫ್ರೀ ಸಮಯದಲ್ಲಿ ಯಾರೋ ಯುವಕರ ಜೊತೆ ಮಾತನಾಡುತ್ತಾಳೆ, ಯಾರು ಎಂದು ಕೇಳಿದರೂ ಹೊಡೆಯುತ್ತಾಳೆ, ಆಕೆಯಿಂದ ನನ್ನ ಜೀವಕ್ಕೆ ರಕ್ಷಣೆ ಕೊಡಿ ಎಂದು ಪೊಲೀಸರಿಗೆ ದೂರಿದ್ದಾರೆ. ಈ ಬಗ್ಗೆ ದೂರು ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!