SHOCKING| ವಿಶ್ವ ದಾಖಲೆ ಬರೆದ ಮೂರು ತಿಂಗಳ ಮಗು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹುಟ್ಟಿ ಮೂರು ತಿಂಗಳೂ ಆಗಿಲ್ಲ ಆಗಲೇ ವಿಶ್ವ ದಾಖಲೆ ಬರೆದಿದೆ ಪುಟ್ಟ ಮಗು. ಹುಟ್ಟಿದ 72 ದಿನಗಳಲ್ಲೇ ಮಗುವೊಂದು ವಿಶ್ವದಾಖಲೆ ಮಾಡಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಈ ಮಗು ಸೃಷ್ಟಿಸಿದ ದಾಖಲೆ ಏನು? ಅಂತೀರಾ..ನೀವೇ ಓದಿ.

ಮಧ್ಯಪ್ರದೇಶ ರಾಜ್ಯದ ಚಿಂದ್ವಾರ ಜಿಲ್ಲೆಯ ಕೇಸರಿ ನಂದನ್ ಸೂರ್ಯವಂಶಿ ಮತ್ತು ಪ್ರಿಯಾಂಕಾ ದಂಪತಿಗೆ ಶರಣ್ಯ ಎಂಬ ಮುದ್ದಾದ ಹೆಣ್ಣುಮಗು ಇದೆ. ಈ ಮಗುವಿಗೆ ಈ ಮೂರು ತಿಂಗಳು. ದಂಪತಿ ಇಬ್ಬರೂ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಂದನ್ ದಂಪತಿ ತಮ್ಮ ಮಗು ಹುಟ್ಟಿದ ಸಂತೋಷವನ್ನು ತಮ್ಮ ಜೀವನದುದ್ದಕ್ಕೂ ಸ್ಮರಣೀಯವಾಗಿಸಲು ಏನಾದರೂ ಮಾಡಬೇಕೆಂದು ಚಿಂತಿಸಿ ಇಂತಹ ಮಗುವಿನ ಹೆಸರಿನಲ್ಲಿ ಪ್ರಮಾಣಪತ್ರಗಳನ್ನು ಮಾಡಿಸಲು ಮುಂದಾದರು.

ಇದಕ್ಕಾಗಿ ಅಂತರ್ಜಾಲದಲ್ಲಿ ಹುಡುಕಿದ ದಂಪತಿಗೆ ಈ ಹಿಂದೆ ಯಾವುದೋ ಮಗುವಿನ ಹೆಸರಿನಲ್ಲಿ 28 ಗುರುತಿನ ದಾಖಲೆಗಳೊಂದಿಗೆ ವಿಶ್ವ ದಾಖಲೆ ಇರುವುದನ್ನು ಕಂಡುಕೊಂಡ ಇವರು ಆ ದಾಖಲೆಯನ್ನು ಮುರಿಯಲು ಶರಣ್ಯ ಹೆಸರಿನಲ್ಲಿ 72 ದಿನಗಳಲ್ಲಿ 31 ಗುರುತಿನ ದಾಖಲೆಗಳನ್ನು ಪಡೆದು ಗುರಿ ಸಾಧಿಸಿದರು.

ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಪೋಸ್ಟ್ ಆಫೀಸ್, ಬ್ಯಾಂಕ್ ಖಾತೆಗಳು ಹೀಗೆ ವಿವಿಧ ದಾಖಲೆಗಳನ್ನು ಮಗುವಿನ ಹೆಸರಿನಲ್ಲಿ ತೆಗೆದುಕೊಳ್ಳಲಾಗಿದೆ. ಶರಣ್ಯ ಅಜ್ಜ ಗೋಪಾಲ್ ಕೂಡ ಅಂಚೆ ನೌಕರರಾಗಿದ್ದು, ಆಧಾರ್, ಪಾಸ್‌ಪೋರ್ಟ್, ಇಮ್ಯುನೈಸೇಶನ್ ಕಾರ್ಡ್, ಲಾಡ್ಲಿ ಲಕ್ಷ್ಮಿ, ಜಾತಿ ಪ್ರಮಾಣಪತ್ರ, ನೇಟಿವಿಟಿ ಪ್ರಮಾಣಪತ್ರ, ರಾಷ್ಟ್ರೀಯ ಆರೋಗ್ಯ ಕಾರ್ಡ್, ಸುಕನ್ಯಾ ಸಮೃದ್ಧಿ, ಮಹಿಳಾ ಸಮ್ಮನ್ನ ಉಳಿತಾಯ ಪತ್ರಗಳು, ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ, ಕಿಸಾನ್ ವಿಕಾಸ್ ಪ್ರಮಾಣ ಪತ್ರ, ಅಂಚೆ ಕಛೇರಿ ಉಳಿತಾಯ ಖಾತೆ ಪ್ರಮಾಣ ಪತ್ರ, ಪಬ್ಲಿಕ್ ಪ್ರಾವಿಡೆಂಟ್, ಪ್ಯಾನ್ ಎಟಿಎಂ ಕಾರ್ಡ್ ಮುಂತಾದ 31 ಪರಿಶೀಲನಾ ದಾಖಲೆಗಳನ್ನು ಮಗುವಿನ ಹೆಸರಿನಲ್ಲಿ ಪಡೆದಿದ್ದಾರೆ.

ಮೊಮ್ಮಗಳ ಹೆಸರಿನಲ್ಲಿ ವಿಶ್ವದಾಖಲೆ ಬಗ್ಗೆ ಮಾತನಾಡಿದ ಅಜ್ಜ..ಗುರುತಿನ ದಾಖಲೆಗಳಿಲ್ಲದೆ ಅನೇಕರು ತೊಂದರೆ ಅನುಭವಿಸುತ್ತಿದ್ದಾರೆ. ದಾಖಲೆ ಪತ್ರಗಳಿದ್ದರೆ ಒಳಿತು ಎಂದು ಅರಿವು ಮೂಡಿಸಲು ಮೊಮ್ಮಗಳ ಹೆಸರಿನಲ್ಲಿ ಈ ರೀತಿ ಮಾಡಿರುವುದಾಗಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!