ವನ್ಯಜೀವಿಗಳಿಗೆ ಶಾಪವಾಯ್ತು ಬಿಸಿಲ ತಾಪ, ನಿರ್ಜಲೀಕರಣದಿಂದ ಎರಡು ಆನೆ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಲ್ಲೇ ಇದೆ. ಬಿಸಿಲಿನಿಂದ ಕೇವಲ ಮನುಷ್ಯರಷ್ಟೇ ಅಲ್ಲದೆ ವನ್ಯ ಮೃಗಗಳೂ ಕೂಡ ಕಂಗಾಲಾಗಿವೆ. ಬಿಸಿಲ ಧಗೆ ವನ್ಯಜೀವಿಗಳಿಗೆ ಶಾಪವಾಗಿ ಪರಿಣಮಿಸಿದ್ದು, ನಿರ್ಜಲೀಕರಣದಿಂದ ಎರಡು ಆನೆಗಳು ಮೃತಪಟ್ಟಿವೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕೋಡಿಹಳ್ಳಿ ವಲಯದ ಯಲವನಾಥ ಅರಣ್ಯಪ್ರದೇಶ ಹಾಗೂ ರಾಮನಗರ ಪ್ರಾದೇಶಿಕ ಅರಣ್ಯ ವಿಭಾಗದ ಬೆಟ್ಟಹಳ್ಳಿ ಬೀಟ್‌ನಲ್ಲಿ ತಲಾ ಒಂದೊಂದು ಕಾಡಾನೆ ಮೃತಪಟ್ಟಿವೆ.

ಯಲವನಾಥ ಅರಣ್ಯದಲ್ಲಿ ಮೃತಪಟ್ಟ ಆನೆ ಸುಮಾರು 25 ವರ್ಷ ಹಾಗೂ ಬೆಟ್ಟಹಳ್ಳಿ ಬೀಟ್ ಕಾಡಿನಲ್ಲಿ ಮೃತಪಟ್ಟ ಆನೆ 14 ವರ್ಷ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ರಾಮನಗರದ ಕನಕಪುರ ವಲಯದ ಬೆಟ್ಟಹಳ್ಳಿ ಬೀಟ್‌ನಲ್ಲಿ ಮೃತಪಟ್ಟಿರುವ 15 ವರ್ಷದ ಗಂಡಾನೆ ಕಳೆದ ಮೂರು ದಿನಗಳ ಹಿಂದೆ ಜಮೀನೊಂದಕ್ಕೆ ಬಂದು ಬಿಸಿಲ ಬೇಗೆ ತಾಳಲಾರದೆ ಕುಸಿದು ಬಿದ್ದಿತ್ತು. ನಿತ್ರಾಣಗೊಂಡಿದ್ದ ಕಾಡಾನೆಯನ್ನು ಗಮನಿಸಿದ ಅರಣ್ಯ ಸಿಬ್ಬಂದಿ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಿ, ನಂತರ ಕಾಡಿಗೆ ಅಟ್ಟಿದ್ದರು. ಆದರೆ, ಭಾನುವಾರ ಅದು ಮೃತಪಟ್ಟಿರುವುದು ತಿಳಿದು ಬಂದಿದೆ. ಅತಿಯಾಗಿ ಮಾವಿನ ಕಾಯಿ ತಿಂದ ಆನೆ ನೀರಿಗಾಗಿ ಹುಡುಕಾಟ ನಡೆಸಿದೆ. ಎಲ್ಲಿಯೂ ನೀರು ಸಿಗದೆ ಕುಸಿದು ಬಿದ್ದಿದೆ ಎಂದು ಹೇಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!