ವಿಶ್ವದ ಜನಸಂಖ್ಯೆ 800 ಕೋಟಿ ದಾಟುವ ಸಾಧ್ಯತೆ, ಇನ್ನೊಂದೇ ವರ್ಷದಲ್ಲಿ ಭಾರತದ ಜನಸಂಖ್ಯೆ ಚೀನಾಗಿಂತ ಹೆಚ್ಚು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜನ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ಇನ್ನೇನು ಒಂದು ವರ್ಷದಲ್ಲಿ ಮೊದಲ ಸ್ಥಾನಕ್ಕೆ ಬರುವ ಎಲ್ಲಾ ಸಾಧ್ಯತೆಗಳಿವೆ.

ವಿಶ್ವ ಜನಸಂಖ್ಯಾ ದಿನದಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿ ವಿಶ್ವದ ಜನಸಂಖ್ಯೆ ನ.15, 2022ರಂದು ಎಂಟು ಶತಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಈ ಪ್ರಕಾರ 2021ರಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿ ಜನಸಂಖ್ಯೆಯಲ್ಲಿ ಮೊದಲ ಸ್ಥಾನಕ್ಕೇರಲಿದೆ.

ಮಾನವ ಅಭಿವೃದ್ಧಿಯಲ್ಲಿ ಭಾರತ ನೂತನ ಮೈಲಿಗಲ್ಲು ಸೃಷ್ಟಿಸಲಿದೆ. ವಿಶ್ವಸಂಸ್ಥೆಯ ಪ್ರಕಾರ, 2030ರಲ್ಲಿ ಸುಮಾರು 8.5 ಶತಕೋಟಿ, 2050ರಲ್ಲಿ 9.7 ಶತಕೋಟಿ ಮತ್ತು 2080ರಲ್ಲಿ ಸುಮಾರು 10.4 ಶತಕೋಟಿ ಬೆಳೆಯಬಹುದು ಎನ್ನಲಾಗಿದೆ.

ವಿಶ್ವ ಜನಸಂಖ್ಯಾ ದಿನದಂದು ಬಿಡುಗಡೆಯಾದ ವಾರ್ಷಿಕ ವಿಶ್ವ ಜನಸಂಖ್ಯೆ ಪ್ರಾಸ್ಪೆಕ್ಟ್ ವರದಿಯಲ್ಲಿ ಜಾಗತಿಕ ಜನಸಂಖ್ಯೆಯು 1950ರಲ್ಲಿ ಇದ್ದ 2.5 ಶತಕೋಟಿ ಜಾಗತಿಕ ಜನಸಂಖ್ಯೆಗಿಂತ ಮೂರು ಪಟ್ಟು ಹೆಚ್ಚು ಎಂದು ವಿಶ್ವ ಸಂಸ್ಥೆ ಅಂದಾಜು ಮಾಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!