ದೇಶಿಯ ಅನಿಲ ಬಿಕ್ಕಟ್ಟು ಎದುರಿಸುತ್ತಿದೆ ವಿಶ್ವದ ಅಗ್ರಮಾನ್ಯ ಎಲ್‌ಎನ್‌ಜಿ ಅನಿಲ ರಫ್ತುರಾಷ್ಟ್ರ ಆಸ್ಟೇಲಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ವಿಶ್ವದ ಅಗ್ರಮಾನ್ಯ ದ್ರವೀಕೃತ ನೈಸರ್ಗಿಕ ಅನಿಲ (LNG) ರಫ್ತುದಾರ ರಾಷ್ಟ್ರವಾದ ಆಸ್ಟ್ರೇಲಿಯಾ ಇದೀಗ, ದೇಶೀಯವಾಗಿ ಅನಿಲ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಆ ದೇಶದಲ್ಲಿನ ವಿದ್ಯುತ್ ಮತ್ತು ಅನಿಲದ ಬೆಲೆಗಳು ತೀವ್ರಗತಿಯಲ್ಲಿ ಏರಿಕೆ ಕಂಡಿವೆ. ಕಲ್ಲಿದ್ದಲು ಉತ್ಪಾದಿತ ವಿದ್ಯುತ್ ಸ್ಥಾವರಗಳ ನಿಲುಗಡೆ ಹಾಗೂ ಮತ್ತು ರಷ್ಯಾದ ಅನಿಲದ ಮೇಲೆ ತಮ್ಮ ಅವಲಂಬನೆ ಕಡಿಮೆ ಮಾಡಲು ಯುರೋಪಿಯನ್ ರಾಷ್ಟ್ರಗಳು ಅತಿಹೆಚ್ಚಿನ ಪ್ರಮಾಣದಲ್ಲಿ ಅನಿಲ ಅಮದು ಮಾಡಿ ಸಂಗ್ರಹಿಸಿಟ್ಟುಕೊಳ್ಳುತ್ತಿರುವುದು ಹಾಗೂ ಎಲ್‌ಪಿಜಿ ಮಾರುಕಟ್ಟೆ ವಶಕ್ಕೆ ನಡೆಯುತ್ತಿರುವ ಜಾಗತಿಕ ಪೈಪೋಟಿಗಳು ಆಸ್ಟ್ರೇಲಿಯಾದಲ್ಲಿ ಅನಿಲ ಬಿಕ್ಕಟ್ಟು ಎದುರಾಗಲು ಕಾರಣವಾಗಿದೆ. ಆಸ್ಟ್ರೇಲಿಯಾದಲ್ಲಿ ಉತ್ಪಾದಿಸಲಾಗುವ ಶೇ. 22 ರಷ್ಟು ನೈಸರ್ಗಿಕ ಅನಿಲವು ಆ ದೇಶದ ಆಂತರಿಕ ಬಳಕೆಗೆ ಅಗತ್ಯವಿದೆ. ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ನೇತೃತ್ವದ ಹೊಸದಾಗಿ ಚುನಾಯಿತ ಸರ್ಕಾರಕ್ಕೆ ಅನಿಲ ಬಿಕ್ಕಟ್ಟನ್ನು ಶಮನಗೊಳಿಸುವುದು ಸವಾಲಾಗಿ ಪರಿಣಮಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!