ವಿಡಿಯೋ ಗೇಮ್ಸ್‌ ಇಂಡಸ್ಟ್ರಿ ಮೇಲೆ ಚೀನಾದ ಬಿಗಿ ನಿಯಮ, ಇದು ಮಕ್ಕಳನ್ನು ಕಾಪಾಡೋ ಹೆಜ್ಜೆ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚೆಗೆ ವಿಡಿಯೋ ಗೇಮ್ಸ್‌ ಮಕ್ಕಳ ಆರೋಗ್ಯದ ಮೇಲೆ ಭಾರೀ ಪ್ರಭಾವವನ್ನು ಬೀರಿವೆ. ವಿಡಿಯೋ ಗೇಮ್‌ಗಳು ಅದೆಷ್ಟೋ ಮಕ್ಕಳ ಜೀವ ತೆಗೆದಿವೆ. ಹಾಗಾಗಿ ಮಕ್ಕಳನ್ನು ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಚೀನಾ ಸರ್ಕಾರ ವಿಡಿಯೋ ಗೇಮ್ಸ್‌ ಇಂಡಸ್ಟ್ರಿ ಮೇಲೆ ಕಠಿಣ ನಿಯಮಗಳನ್ನು ಜಾರಿಮಾಡಿದೆ. ಬೀಜಿಂಗ್‌ನಲ್ಲಿ ಕಳೆದ ಆರು ತಿಂಗಳ ಹಿಂದೆ ಎರಡು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳ ನಡುವೆ $6 ಬಿಲಿಯನ್ ವಿಲೀನವನ್ನು ನಿರ್ಬಂಧಿಸಿತ್ತು. ಇದರಲ್ಲಿ ಟೆನ್ಸೆಂಟ್ ಕೂಡಾ ಪಾಲುದಾರನಾಗಿತ್ತು. ಸರ್ಕಾರದ ಈ ನಿರ್ಧಾರದಿಂದಾಗಿ ಇದೀಗ ಟೆನ್ಸೆಂಟ್ ತನ್ನ ಸ್ಟ್ರೀಮಿಂಗ್ ಸೇವೆ ಪೆಂಗ್ವಿನ್ ಎಸ್ಪೋರ್ಟ್ಸ್ ಅನ್ನು ಅಧಿಕೃತವಾಗಿ ಮುಚ್ಚುತ್ತಿದೆ.

ಗೇಮಿಂಗ್ ಉದ್ಯಮದ ಕಡೆಗೆ ಚೀನಾದ ಪ್ರತಿಕೂಲ ವರ್ತನೆ ಹೊಸದೇನಲ್ಲ. ವಿಡಿಯೋ ಗೇಮ್‌ಗಳಿಗೆ ಮಕ್ಕಳು ವ್ಯಯಿಸುತ್ತಿದ್ದ ಆಟದ ಸಮಯವನ್ನು ಕೂಡಾ ನಿಷೇಧಿಸಿದೆ. ಈ ವರ್ಷದ ಮೇ ತಿಂಗಳಲ್ಲಿ ಯಾವುದೇ ಹೊಸ ಆಟದ ಟೈಟಲ್‌ ಸ್ಪಾನ್ಸರ್‌ ಹಂಚಿಕೆ ಮಾಡುವಂತಿಲ್ಲ ಎಂದಿದೆ. ಆದರೆ ಜೂನ್‌ನಲ್ಲಿ 60ಆಟಗಳಿಗೆ ಅನುಮೋದನೆ ನೀಡಿದ್ದು, ಈ ಉದ್ಯಮದ ಅತಿದೊಡ್ಡ ಕಂಪನಿಗಳಾದ ಟೆನ್ಸೆಂಟ್ ಮತ್ತು ನೆಟ್‌ಈಸ್‌ ಇದರಿಂದ ವಂಚಿತವಾಗಿದೆ.

ಜುಲೈ 2021 ಮತ್ತು ಏಪ್ರಿಲ್ 2022 ರ ನಡುವೆ ಬೀಜಿಂಗ್‌ನಲ್ಲಿ 14,000 ಗೇಮ್ ಸ್ಟುಡಿಯೋಗಳನ್ನು ಮುಚ್ಚಲಾಗಿದೆ. ಇದರಲ್ಲಿ ತೊಡಗಿಕೊಂಡಿರುವ ಬಹುತೇಕ ಉದ್ಯಮಿಗಳು ಬೇರೆಡೆಗೆ ಮುಖಮಾಡಲು ಕಾರಣವಾಗಿದೆ. ಈ ನಿಟ್ಟಿನಲ್ಲಿ ನೆಟ್‌ಈಸ್ ತನ್ನ ಮೊದಲ ಯುಎಸ್‌-ಆಧಾರಿತ ಸ್ಟುಡಿಯೊವನ್ನು ಟೆಕ್ಸಾಸ್‌ನಲ್ಲಿ ತೆರೆಯುವುದಾಗಿ ಕಳೆದ ತಿಂಗಳು ಘೋಷಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!