ಕಲ್ಲುತೂರಾಟಗಾರರಿಗೆ ಪಾಠ ಕಲಿಸ್ತಿದೆ ಯೋಗಿ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪ್ರತಿಭಟನೆಯ ಹೆಸರಿನಲ್ಲಿ ಗಲಭೆ ನಡೆಸಿ ಪೋಲೀಸರೊಂದಿಗೇ ಘರ್ಷಣೆ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಕ್ಕೆ ಕಾರಣವಾದ ಪುಂಡರಿಗೆ ಯೋಗಿ ಸರ್ಕಾರ ಸರಿಯಾದ ಪಾಠ ಕಲಿಸುತ್ತಿದೆ.

ಸಾರ್ವಜನಿಕ ಆಸ್ತಿ ನಷ್ಟಗೊಳಿಸಿದ ಕಲ್ಲುತೂರಾಟಗಾರರಿಗೆ ಸಂಬಂಧಿಸಿದ ಅಕ್ರಮ ಕಟ್ಟಡಗಳನ್ನು ಮುಲಾಜಿಲ್ಲದೇ ಬುಲ್ಡೋಜರ್‌ ಹತ್ತಿಸಿ ನೆಲಸಮ ಮಾಡುತ್ತಿದೆ. ಈ ಹಿಂದೆಯೂ ಕೂಡ ಸಾರ್ವಜನಿಕ ಆಸ್ತಿಗೆ ಹಾನಿಯುಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಯೋಗಿ ಸರ್ಕಾರ ಎಚ್ಚರಿಕೆ ನೀಡಿತ್ತು. ಆಸ್ತಿ ಹಾನಿ ಮಾಡಿದವರನ್ನು ಪತ್ತೆಹಚ್ಚಿ ಅವರಿಂದಲೇ ನಷ್ಟಭರಿಸುವಂತೆ ಕ್ರಮ ಕೈಗೊಳ್ಳಲಾಗಿತ್ತು.

ಆದರೆ ಗಲಭೆಕೋರರು ತಮ್ಮ ಪುಂಡಾಟಿಕೆ ಮುಂದುವರೆಸಿದ್ದರಿಂದ ಬುಲ್ಡೋಜರ್‌ ಬಳಸಿ ತಕ್ಕ ಪಾಠ ಕಲಿಸುತ್ತಿದೆ.

ಆಗಿದ್ದೇನು?
ಪ್ರವಾದಿ ಹೇಳಿಕೆ ಕುರಿತಾಗಿ ಕೆಲ ಮುಸ್ಲಿಮರು ಶುಕ್ರವಾರದ ನಮಾಜಿನ ನಂತರ ಉತ್ತರ ಪ್ರದೇಶದ ವಿವಿಧೆಡೆ ಪ್ರತಿಭಟನೆ ನಡೆಸಿದ್ದರು. ಪ್ರಯಾಗ್‌ರಾಜ್‌ ಪ್ರದೇಶದ ಅಟಾಲಾದಲ್ಲಿ ಉದ್ರಿಕ್ತ ಗಲಭೆಕೋರರು ಕಲ್ಲು ತೂರಾಟ ನಡೆಸಿದ್ದರು. ಹಲವೆಡೆ ಪೋಲೀಸ್‌ ಸಿಬ್ಬಂದಿಗಳೊಂದಿಗೇ ಘರ್ಷಣೆಗಳು ನಡೆದಿದ್ದವು.

ಈ ಕುರಿತು ಕಲ್ಲುತೂರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಯೋಗಿ ಸರ್ಕಾರ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 304ಕ್ಕೂ ಹೆಚ್ಚು ಗಲಭೆಕೋರರನ್ನು ಬಂಧಿಸಲಾಗಿದೆ. 13ಕ್ಕೂ ಹೆಚ್ಚು ಎಫ್‌ಐಆರ್‌ ದಾಖಲಿಸಲಾಗಿದೆ.

ಗಲಭೆಯ ಮಾಸ್ಟರ್‌ ಮೈಂಡ್‌ ಮೊಹಮ್ಮದ್‌ ಜಾವೆದ್‌ ಅಹ್ಮದ್‌ ಅಲಿಯಾಸ್‌ ಜಾವೇದ್‌ ಪಂಪ್‌ ಎಂಬಾತನನ್ನು ವಶಕ್ಕೆ ಪಡೆಯಲಾಗಿತ್ತು. ಕಲ್ಲು ತೂರಾಟಕ್ಕೆ ಕಾರಣವಾಗಿರುವ ಆತನಿಗೆ ಸಂಬಂಧಿಸಿದ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಆದೇಶಿಸಿತ್ತು. ಅದರಂತೆ ಇಂದು ಬುಲ್ಡೋಜರ್‌ ಮೂಲಕ ಆತನ ಹೆಸರಿನಲ್ಲಿದ್ದ ಅಕ್ರಮ ಕಟ್ಟಡವನ್ನು ಬುಲ್ಡೋಜರ್‌ ಹತ್ತಿಸಿ ತೆರವುಗೊಳಿಸಲಾಗಿದೆ. ಹಾಗು ಗಲಭೆಯಲ್ಲಿ ಭಾಗಿಯಾಗಿದ್ದ ಸಹರಾನ್‌ಪುರದ ಇತರ ಇಬ್ಬರು ಗಲಭೆಕೋರರ ಅಕ್ರಮ ಕಟ್ಟಡಗಳನ್ನೂ ನೆಲಸಮ ಗೊಳಿಸಲಾಗಿದೆ. ಆ ಮೂಲಕ ಪ್ರತಿಭಟನೆ ಹೆಸರಿನಲ್ಲಿ ಗಲಭೆ ನಡೆಸಿ ಕಲ್ಲು ತೂರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!