Sunday, June 4, 2023

Latest Posts

ಸಮುದ್ರ ಬಂಡೆ ಮಧ್ಯಕ್ಕೆ ಸಿಲುಕಿ ರಾತ್ರಿಯಿಡೀ ಕಳೆದ ಯುವಕ!

ಹೊಸದಿಗಂತ ವರದಿ ಭಟ್ಕಳ:

ತನ್ನ ಸ್ನೇಹಿತನೊಂದಿಗೆ ಹಡೀನ್ ಯಲ್ಲಿರುವ ಹುಯ್ಲಮೂಡಿ ಇಕೋ ಪಾರ್ಕ್ ತೆರಳಿದ ಯುವನೋರ್ವ ಸಮುದ್ರ ಬಂಡೆ ಮದ್ಯದಲ್ಲೆ ಒಂದು ದಿನ ಕಳೆದ ಘಟನೆ ನಡೆದಿದೆ.

ಯುವಕನನ್ನು ಸಮೀರ್  ಸುಲೇಮಾನ್ ಅಬು ಭಟ್ಕಳದ ಹಳೆ ಬಸ್ ನಿಲ್ದಾಣದ ನಿವಾಸಿ ಎಂದು ತಿಳಿದು ಬಂದಿದೆ. ಈತ ತನ್ನ ಸ್ನೇಹಿತ ಆಟೋದಲ್ಲಿ ಹಡೀನ್ ಯಲ್ಲಿರುವ ಹುಯ್ಲಮೂಡಿ ಇಕೋ ಪಾರ್ಕ್ ತೆರಳಿದ್ದಾನೆ. ಬಳಿಕ ಅಲ್ಲೇ ಗುಡ್ಡ ಸಮೀಪ ಇರುವ ಕಲ್ಲು ಬಂಡೆಗಳ ಮಧ್ಯ ಹೋದವನು ಮತ್ತೆ ಮರಳಿ ಬರದ ಕಾರಣ ಆತನ ಸ್ನೇಹಿತ ಭಯಗೊಂಡು ಅಲ್ಲಿಂದ ತೆರಳಿದ್ದಾನೆ. ಸಂಜೆಯಾದಂತೆ ಪಾರ್ಕಿನ ಸಮಯಕ್ಕೆ ಬಂದ ಮಾಡಲಾಗಿದೆ.

ಇತ್ತ ಯುವಕಾಣಿಗಾಗಿ ಈತನ ಪಾಲಕರು ಹುಡುಕಾಟ ನಡೆಸಿದ್ದಾರೆ. ಬಳಿಕ ಮರು ದಿನ ಬೆಳಿಗ್ಗೆ ಯುವಕನು ಬಂಡೆಯ ಮಧ್ಯದಲ್ಲಿ ಸಿಲುಕಿರುದನ್ನು ಕಂಡ ತಕ್ಷಣ ಭಟ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಬಂದು ಅಗ್ನಿಶಾಮಕ ಸಿಬ್ಬಂದಿ ಹಗ್ಗದ ಸಹಾಯದಿಂದ ಯುವಕನನ್ನು ರಕ್ಷಣೆ ಮಾಡಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಯುವಕನ ಕುಟುಂಬಸ್ಥರು ಸ್ಥಳದಲ್ಲಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!