Wednesday, June 7, 2023

Latest Posts

‘ಶೆಟ್ಟರ್‌ಗೆ ಟಿಕೆಟ್ ಕೊಡಿಸೋಕೆ ಟ್ರೈ ಮಾಡಿದ್ದೆ!’

ಹೊಸದಿಗಂತ ವರದಿ ಹುಬ್ಬಳ್ಳಿ:

ಮಾಜಿ ಸಿಎಂ ಜಗದೀಶ ಶೆಟ್ಟರ್ ಗೆ ಟಿಕೆಟ್ ಕೊಡಿಸಲು ನಾನು ಪ್ರಯತ್ನ ಮಾಡಿದ್ದೇನೆ. ತಪ್ಪಿಸಿದ್ದು ನಾನಲ್ಲ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹಾಗೂ ಶೆಟ್ಟರ್ ಬಹಳ ಆತ್ಮೀಯರು . ಬಹಳಷ್ಟು ಜನರು ಬಹಳ ಮಾತನಾಡುತ್ತಾರೆ. ಶೆಟ್ಟರ್ ಗೆ ಟಿಕೆಟ್ ತಪ್ಪಿಸುವ ಪ್ರಯತ್ನ ಯಾವತ್ತೂ ಮಾಡಿಲ್ಲ ಎಂದರು.

ನೀರಾವರಿ ಯೋಜನೆಗಳಲ್ಲಿ 1500 ಕೋಟಿ ರೂಪಾಯಿ ಭ್ರಷ್ಟಾಚಾರ ವಾಗಿದೆ ಎಂದು ಆರೋಪ ಮಾಡಿರುವ ನೆಹರು ಓಲೇಕಾರ ದಾಖಲೆಗಳನ್ನು ಕೊಡಲಿ. ಬಿಜೆಪಿ ಟಿಕೆಟ್ ಹಂಚಿಕೆ ಮಾಡಿರುವ 63 ಕ್ಷೇತ್ರಗಳಲ್ಲಿ ಗೊಂದಲವಿದೆಯೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳುವುದಾದರೆ ಕಾಂಗ್ರೆಸ್ ಗೆ ಸ್ವಂತ ಶಕ್ತಿ ಇಲ್ಲ ಎಂದಾಯಿತು. ಬಿಜೆಪಿಯಲ್ಲಿ ಎಲ್ಲ ಗೊಂದಲವು 2-3 ದಿನಗಳಲ್ಲಿ ತಿಳಿಯಾಗುತ್ತದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!